ಹಾಸನ: ‘ಜಮೀರ್ ಅಹಮದ್ ಒಬ್ಬ ಮುಸ್ಲಿಂ ಮಾಸ್ ಲೀಡರ್, ಕುಮಾರಸ್ವಾಮಿ ಪಾಪ ಮಂತ್ರಿ ಮಾಡಿದ್ದ. ಜಮೀರ್ ಅಹಮದ್ ಒಬ್ಬ ಕಾಂಗ್ರೆಸ್‌ನ ದೂಡ್ಡ ಲೀಡರ್, ಅಲ್ಲಿ ಮುಖ್ಯಮಂತ್ರಿ ಆಗಬಹುದೇನೋ,’ ಎಂದು ಜಾಫರ್‌ ಶರೀಫ್‌ ಅವರ ಹೆಸರು ಹೇಳಿ ಮಾಜಿ ಪ್ರಧಾನಿ ದೇವೇಗೌಡ ವ್ಯಂಗ್ಯವಾಡಿದರು.

ನೈಸ್ ವಿಚಾರದಲ್ಲಿ ಸಿಎಂ ಮತ್ತು ಜಗದೀಶ್ ಶೆಟ್ಟರ್ ವೀರಾವೇಶದಲ್ಲಿ ಮಾತನಾಡಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡ ಮಾತನಾಡಿದರು. ಆದರೂ ನೈಸ್ ವರದಿ ಸದನ ಸಮಿತಿಯಲ್ಲಿ ಜಾರಿಯಾಗಿಲ್ಲ. ನೈಸ್ ಎನ್ನುವುದು ಬೇನಾಮಿ ಕಂಪನಿ. ರಸ್ತೆ ಮುಗಿದ ಬಳಿಕ ಟೋಲ್ ಸಂಗ್ರಹಿಸಬೇಕು ಎಂಬ ನಿಯಮವಿದೆ. ಆದರೆ ಇವರು ಎಲ್ಲೆಡೆ ಟೋಲ್ ಸಂಗ್ರಹಿಸುತ್ತಿದ್ದಾರೆ ಎಂದರು.

RELATED ARTICLES  ಎಂ.ಪಿ.ಅನಂತಕುಮಾರ ಹೆಗಡೆ ಭೂಗತ : ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಆರೋಪ

ಟೋಲ್ ಟ್ಯಾಕ್ಸ್ ದಿನಕ್ಕೆ ಒಂದೂವರೆ ಕೋಟಿ ಹಣ ಬರುತ್ತಿದೆ. ಆದರೆ ಏನೂ ಮಾಡಿಲ್ಲ, ನಾನು ಬೀದಿಗಿಳಿದು ರಸ್ತೆಯಲ್ಲಿ ಹೋರಾಟ ಮಾಡಿದ್ದೇನೆ. ನೈಸ್ ಅವ್ಯವಹಾರದ ಬಗ್ಗೆ ಸೋನಿಯಾಗಾಂಧಿಗೂ ಪತ್ರ ಬರೆದಿದ್ದೇನೆ.
ಈಗಿನ ಪ್ರಧಾನಿಯನ್ನೂ ಭೇಟಿ ಮಾಡಿದ್ದೇನೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಸಿಎಂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಿದ್ದಾರೆ. ಆದರೆ ಏನು ಮಾಡುತ್ತಿದ್ದಾ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು.

ನೈಸ್ ವರದಿಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ ಅವರು, ನೈಸ್ ಅವ್ಯವಹಾರವನ್ನು ಮುಂದಿನ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಲು ಚಿಂತನೆ ಇದೆ. ನನ್ನ ಹೋರಾಟದ ಬಗ್ಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮೂರು ಭಾಷೆಯಲ್ಲಿ ಪುಸ್ತಕ ಬರೆಯುತ್ತಿದ್ದೇನೆ. ನರ್ಮದಾ, ಡೋಕ್ಲಾಂ ಸೇರಿದಂತೆ ನರ್ಮದಾ ನದಿ ವಿಚಾರ ಸೇರಿ ತಾವು ಮಾಡಿದ ಹೋರಾಟದ ಬಗ್ಗೆ ಪುಸ್ತಕ ಬರೆಯುತ್ತೇನೆ. ಅ. 11 ರಿಂದ ನ. 1ರವರೆಗೆ ಒಂದು ತಿಂಗಳ ಕಾಲ ಆಕಾಂಕ್ಷಿ ಅಭ್ಯರ್ಥಿಗಳು ಕಡ್ಡಾಯವಾಗಿ ‘ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿದೆ. ಕಾರ್ಯಕ್ರಮದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ವರದಿ ತರಿಸಿಕೊಳ್ಳುತ್ತೇನೆ, ನಮ್ಮ ಪಕ್ಷದಲ್ಲಿ ಕೆಲವು ಕಡೆ ಅನೇಕ ಗೊಂದಲವಿದೆ ಎಲ್ಲರ ಜತೆ ಕುಳಿತು ಚರ್ಚಿಸಿ ಸರಿಪಡಿಸುತ್ತೇನೆ ಎಂದು ಹೇಳಿದರು.

RELATED ARTICLES  ಬದುಕಿ ಬಾಳಬೇಕಾಗಿದ್ದ ಸಂಹಿತಾ ಇನ್ನಿಲ್ಲ.