ಗೋಕರ್ಣ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುವ ವೇಳೆ ಪುಷ್ಪ ಪ್ರಸಾದವಾಗಿದೆ. ಪಂಚರತ್ನ ಯಾತ್ರೆಯ ನಿಮಿತ್ತ ಗೋಕರ್ಣಕ್ಕೆ ಆಗಮಿಸಿದ್ದ ಕುಮಾರಸ್ವಾಮಿಯವರು ಮಹಾಬಲೇಶ್ವರನ ಪೂಜೆಯ ಬಳಿಕ ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಗಣಪತಿಯ ತಲೆಯ ಮೇಲಿಂದ ಬಲಕ್ಕೆ ಹೂವಿನ ಪ್ರಸಾದವಾಗಿದೆ. ಅರ್ಚಕರು ಬಿದ್ದ ಹೂವನ್ನು ಎತ್ತಿ ಕುಮಾರಸ್ವಾಮಿಗೆ ನೀಡಿದ್ದು, ಅವರು ಅದನ್ನು ಸಂತಸದಿಂದ ಸ್ವೀಕರಿಸಿ ತೆರಳಿದ್ದಾರೆ. ಜನತೆಯ ಬೆಂಬಲ ನಿಮಗೆ ಸಿಗುವಂತಾಗಲಿ ಎಲ್ಲ ರೀತಿಯ ಯಶಸ್ಸು ಪ್ರಾಪ್ತವಾಗಲಿ ಎಂದು ಪ್ರಾರ್ಥಿಸುತ್ತಿರುವಾಗಲೇ ಪ್ರಸಾದವಾಗಿದ್ದು ಎಲ್ಲರನ್ನೂ ಅಚ್ಚರಿ ಮೂಡಿಸಿದೆ.