ಕುಮಟಾ : ಶಿಕ್ಷಣ, ಉದ್ಯೋಗ, ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಜೆ.ಡಿ.ಎಸ್ ನ ಜನಪರ ಯೋಜನೆಯಾದ ‘ಪಂಚರತ್ನ’ ಯೋಜನೆಯನ್ನು ಜಾರಿಗೆತರದಿದ್ದಲ್ಲಿ ಮುಂದಿನ ದಿನದಲ್ಲಿ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದರು. ಅವರು ಕುಮಟಾದ ಹೆಗಡೆಯ ಶಾಂತಿಕಾಂಬಾ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡ ಪಂಚರತ್ನ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮೆಲ್ಲರ ಆಶೀರ್ವಾದ ಪಡೆಯಲು ಈ ಯಾತ್ರೆ ಪ್ರಾರಂಭಿಸಿರುವುದಾಗಿ ಮಾತು ಪ್ರಾರಂಭಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜ್ಯದ ಪ್ರತೀ ಕುಟುಂಬಕ್ಕೆ ಎಲ್ಲ ರೀತಿಯ ಪ್ರಗತಿಗೆ ಅನುಕೂಲ ವಾಗುವಂತೆ ಐದು ರೀತಿಯ ಯೋಚನೆಗಳನ್ನು ಜಾರಿಗೆ ತರಲು ಉದ್ದೇಶಿಸಿ ಈ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ರೀತಿಯ ಶಿಕ್ಷಣದ ವ್ಯವಸ್ಥೆ ಇಲ್ಲ. ಮಕ್ಕಳು ವಿದ್ಯೆಯನ್ನು ಪಡೆಯಲು ಸರ್ಕಾರಿ ಶಾಲೆಗಳ ವ್ಯವಸ್ಥೆ ಸರಿಯಿಲ್ಲ ಎಂಬುದಾಗಿ ಖಾಸಗಿ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಉಚಿತ ಶಿಕ್ಷಣಕ್ಕೆ ಅತ್ಯುತ್ತಮ ಸೌಲಭ್ಯ ಕಲ್ಪಿತಿಸುವುದು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಸಾಲ ಸೂಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ನಮ್ಮದಿದೆ. ರೈತರ ಸಾಲ ಮನ್ನಾ ಹಾಗೂ ರೈತರಿಗೆ ಅಗತ್ಯವಾದ ಪರಿಕರ ಖರೀದಿಗೆ ಯೋಗ್ಯ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಮುಂದಾಗುತ್ತಿದೆ. ಅತ್ಯುತ್ತಮ ಗೋಡೌನ್ ನಿರ್ಮಾಣ, ರೈತರಿಗೆ ಯೋಗ್ಯ ಬೆಲೆ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ.

RELATED ARTICLES  ಕುಮಟಾದಲ್ಲಿ ಭೀಕರ ಅಪಘಾತ : ಇಬ್ಬರ ಸಾವು.

ಪ್ರತಿ ಕುಟುಂಬದ ಯುವಕ ಯುವತಿಯರು ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ನಮ್ಮ ಸರಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. 65 ವರ್ಷ ಮೇಲ್ಪಟ್ಟವರಿಗೆ ನೆಮ್ಮದಿಯ ಬದುಕು ನೀಡಲು ಪ್ರತಿ ತಿಂಗಳು 5,೦೦೦ ರೂ ನೀಡುವ ಯೋಚನೆ ಹಾಗೂ ವಿಧವೆಯರಿಗೆ ಹಾಗೂ ಮದುವೆ ಆಗದೇ ಇರುವವರಿಗೆ ೧,೨೦೦ ಕ್ಕೆ ಏರಿಸುವುದು. ಸೊಸೈಟಿಯಲ್ಲಿ ಮಾಡಿದ ಸಾಲವನ್ನು ಸರ್ಕಾರ ರಚನೆಯ 24 ಗಂಟೆ ಒಳಗೆ ಮನ್ನಾ ಮಾಡುವ ಯೋಜನೆ ಇದೆ. ಸಣ್ಣಪುಟ್ಟ ವ್ಯಾಪಾರಿಗಳು ಬೀದಿಬದಿ ವ್ಯಾಪಾರಿಗಳು ಹಾಗೂ ಎಲ್ಲರಿಗೆ ಬದುಕು ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.

RELATED ARTICLES  ಕುಮಟಾದಲ್ಲೊಂದು ಅಪಘಾತ : ಸಿನಿಮೀಯ ರೀತಿಯಲ್ಲಿ ಇಬ್ಬರು ಬಚಾವ್..!

ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರ ಏನು ಮಾಡುತ್ತಿದೆ? ಎಂಬುದರ ಬಗ್ಗೆ ನಿಮಗೆ ಈಗಾಗಲೇ ಗಮನಕ್ಕೆ ಇದೆ ನೀವು ಬಹುಮತದಿಂದ ನಮ್ಮನ್ನು ಆರಿಸಿ ತಂದರೆ ಸಂಪೂರ್ಣ ಬಹುಮತದ 5 ವರ್ಷದ ಸರಕಾರಕ್ಕೆ ಆಶೀರ್ವಾದ ಮಾಡಿದರೆ ನಿಮ್ಮಗಳ ಸೇವೆ ಮಾಡಿ, ನಿಮ್ಮ ಋಣ ತೀರಿಸುತ್ತೇವೆ. ಆಡಿದ ಮಾತಿಗೆ ತಪ್ಪಿದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅನ್ಯಾಯದಿಂದ ನನ್ನನ್ನು ಹಿಂದೆ ಸರಿಸುವ ಪ್ರಯತ್ನ ಈ ಹಿಂದೆ ಕೆಲವು ಪಕ್ಷದಿಂದ ನಡೆದಿತ್ತು. ಆದರೆ ನಾನು ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ನನಗೆ ಬಲ ತುಂಬಿದವರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಎಂದು ತಿಳಿಸುತ್ತಾ, ಉಪನ್ಯಾಸಕನಾಗಿರುವ ಸಂದರ್ಭದಿಂದಲೂ ಜನರ ಜೊತೆಗೆ ಇದ್ದವನು. ನಾನು ನನ್ನ ವೃತ್ತಿಯನ್ನು ಬಿಟ್ಟು ಜನಸೇವೆಗೆ ಬಂದಿದ್ದು ನಿಮ್ಮೆಲ್ಲರ ಸೇವೆ ಮಾಡುವ ಉದ್ದೇಶದಿಂದ ಎಂದು ತಿಳಿಸಿದರು.

ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ಗಣಪಯ್ಯ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಜತೆಯಲ್ಲಿ ಇದ್ದರು.