ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು JEE (MAIN) – 2023 ರಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕು. ರಂಜಿತಾ ನಾಯಕ್, ಕು. ಪ್ರಾಪ್ತಿ ನಾಯಕ್, ಕು. ಸಿಂಧು ಎಮ್., ಕು.ಶ್ರೀಜನಿ ಭಟ್, ಕು.ವಿಶಾಲ್ ನಾಯ್ಕ, ಹಾಗೂ ಇತರ ವಿದ್ಯಾರ್ಥಿಗಳು ಜನವರಿ 2023ರಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಮುಂದಿನ ಹಂತದ ಪರೀಕ್ಷೆಗೆ ಆಯ್ಕೆಗೊಂಡು ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟರವರು ಹಾಗೂ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷವನ್ನು ವ್ಯಕ್ತಪಡಿಸಿ ಮುಂದಿನ ಹಂತದ ಪರೀಕ್ಷೆಗಳಿಗೆ ಶುಭ ಹಾರೈಸಿದ್ದಾರೆ.

RELATED ARTICLES  ಕುಡ್ಲೆ ಬೀಚ್ ನಲ್ಲಿ ಕಂಡು ಬಂದ ಮಾನವನ ತಲೆಬುರುಡೆ

Show quoted text