ಬೆಂಗಳೂರು: ಆನೇಕಲ್‌ ತಾಲೂಕಿನ ಹುಸ್ಕೂರು ಗೇಟ್ ಬಳಿಯ ಶಾಲೆಯೊಂದು ಯುಕೆಜಿ ಓದುತ್ತಿದ್ದ ಮಗುವನ್ನು ಶಿಕ್ಷಣ ಸಂಸ್ಥೆ ಫೇಲ್ ಮಾಡಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಪುಟಾಣಿ ಬಿ ನಂದಿನಿ ಎಂಬವಳನ್ನು ಸಂಸ್ಥೆ ಅನುತ್ತೀರ್ಣ ಮಾಡಿದ್ದು, ಶಾಲೆಯ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಮಾಜಿ ಶಿಕ್ಷಣ ಸಚಿವ ಸುರೇಶಕುಮಾರ ಅವರು ಟ್ವೀಟ್ ಮಾಡಿದ್ದು, ಶಾಲೆ ಮಗುವನ್ನು ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಕೂಡ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES  ಮಗನ ಮೇಲೆ ಆಣೆಗೂ ಸಾಲ ಮನ್ನಾ ಮಾಡೇ ಮಾಡ್ತೀನಿ : ಸಿ.ಎಂ ಹೆಚ್. ಡಿ.ಕುಮಾರಸ್ವಾಮಿ.

ಈ ಬಗ್ಗೆ ಮಗುವಿನ ಪಾಲಕರು ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಮಗಳನ್ನು ಜೋಸೆಫ್ ಚಾಮಿನೇಡ್ ಅಕಾಡೆಮಿಯು ಫೇಲ್​ ಮಾಡಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ ಈ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ನಿರಾಕರಿಸಿತು. ಬೇರೆ ಮಕ್ಕಳ ಪಾಲಕರು ಈ ವಿಚಾರದಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಸದ್ಯಕ್ಕೆ ಒಂದು ಮಗುವಿಗೆ ನಾವೇನು ಮಾಡಲು ಆಗುವುದಿಲ್ಲ. ಬದಲಾಗಿ ಮಗುವಿನ ಫೇಲ್​ ಆಗಿರುವ ಬಗ್ಗೆ ತಿಳಿಸಿ, ಭವಿಷ್ಯದಲ್ಲಿ ಚೆನ್ನಾಗಿ ಓದುವಂತೆ ಹೇಳಿ ಎಂದು ಪ್ರಾಂಶುಪಾಲರು ನಮಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.ಕೇವಲ 6 ವರ್ಷದ ಮಗುವನ್ನು ಫೇಲ್​ ಮಾಡುವುದೆಂದರೆ… ಇದು ಮಗುವಿನ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನಂಬುತ್ತೇವೆ ಮತ್ತು ಇಂಥದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶಿಕ್ಷಣ ಸಚಿವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪಾಲಕರು ಬರೆದುಕೊಂಡಿದ್ದಾರೆ.

RELATED ARTICLES  ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ