ಮೀನಿನ ಅಕ್ವೇರಿಯಂ ಇಷ್ಟ, ಆದರೆ ಮನೆಯಲ್ಲಿ ಅದನ್ನು ತಂದಿಡಲು ಸ್ಥಳವಾಕಾಶದ ಕೊರತೆ ಇದೆ ಎಂದು ಕೊರಗುವವರಿಗೆ ಈಗ ಅಕ್ವೇರಿಯಂ ವಿದ್‌ ಫರ್ನಿಚರ್‌ ಎಂಬ ಹೊಸ ನಮೂನೆಯ ಅಕ್ವೇರಿಯಂಗಳು ಮಾರುಕಟ್ಟೆಗೆ ಬಂದಿವೆ. ಇದರಲ್ಲಿ ಅಕ್ವೇರಿಯಂಗಳನ್ನು ಫರ್ನಿಚರ್‌ಗಳ ಖಾಲಿ ಸ್ಥಳಗಳಲ್ಲೇ ಫಿಕ್ಸ್‌ ಮಾಡಿರುತ್ತಾರೆ.

-ಇಂಥ ಅಕ್ವೇರಿಯಂಗಳನ್ನು ಟೀಪಾಯ್‌ ಗಾಜಿನ ಕೆಳ ಭಾಗದಲ್ಲಿ, ಡೈನಿಂಗ್‌ ಟೇಬಲ್‌ನ ಮಧ್ಯೆ ಗೋಲಾಕಾರದ ಅಥವಾ ಸ್ಕ್ವೇರ್‌ ಶೇಪ್‌ನ ಅಕ್ವೇರಿಯಂ, ಟಿವಿ ಸ್ಟ್ಯಾಂಡ್‌ನ ಕೆಳ ಭಾಗದಲ್ಲಿ, ಬೆಡ್‌ರೂಮಿನಲ್ಲಿರುವ ಮಂಚದ ಒಂದು ತುದಿಗೆ ಅಥವಾ ಮಂಚದ ಪಕ್ಕಕ್ಕೆ ಇರುವ ಬೆಡ್‌ ಸ್ಟ್ಯಾಂಡ್‌ಗೆ ಹೀಗೆ ಎಲ್ಲಿ ಬೇಕಿದ್ದರೂ ಅಳವಡಿಸಬಹುದು.

RELATED ARTICLES  ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ಆಯ್ಕೆ

-ಬಾತ್‌ರೂಮಿನಲ್ಲೂ ಅಕ್ವೇರಿಯಂ ಇರಬೇಕು ಎಂದು ಬಯಸುವವರಿಗೂ ಆಪ್ಷನ್‌ ಇದೆ. ಗೋಡೆಯಲ್ಲೇ ಬರುವ ವಾಲ್‌ ಅಕ್ವೇರಿಯಂ, ಗಾಜಿನ ವಾಶ್‌ ಬೇಸಿನ್‌ ರೀತಿ ಇರುವ ಅಕ್ವೇರಿಯಂ, ಕಮೋಡ್‌ನಂತಿರುವ ಡಿಸೈನರ್‌ ಅಕ್ವೇರಿಯಂಗಳೂ ಸಿಗುತ್ತವೆ.

-ಅಕ್ವೇರಿಯಂನೊಳಗೆ ಟೆಟ್ರಾ, ರೇನ್‌ಬೊ, ಗೋಲ್ಡ್‌ ಫಿಶ್‌ ಹಾಗೂ ಕ್ಯಾಟ್‌ ಫಿಶ್‌ಗಳನ್ನು ಇಟ್ಟರೆ ಚೆನ್ನಾಗಿ ಕಾಣುತ್ತವೆ.

RELATED ARTICLES  ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ..!

-ಮೀನುಗಳ ಜೊತೆಗೆ ಅಲಂಕಾರಿಕ ಸಸ್ಯ, ಬೆಣಚು ಕಲ್ಲುಗಳು, ಕಾರಲ್‌ ದಿಣ್ಣೆಗಳನ್ನು ಇಟ್ಟರೂ ಆಕರ್ಷಕವಾಗಿರುತ್ತದೆ.

-ಅಕ್ವೇರಿಯಂಗಳನ್ನು ಆಗಾಗ ಸ್ವಚ್ಛಗೊಳಿಸುವುದು, ಅದಕ್ಕೆ ಬೇಕಾದ ಆಹಾರ ಹಾಕುವುದು, ನೀರನ್ನು ಬದಲಾಯಿಸುವುದು ಇತ್ಯಾದಿಗಳು ತುಂಬಾ ತಾಳ್ಮೆಯಿಂದ ಮಾಡಬೇಕಾದ ಕೆಲಸಗಳು. ಮನೆಯಲ್ಲಿ ಎಲ್ಲರೂ ದುಡಿಯುವ ಜನರಿದ್ದರೆ ಅಕ್ವೇರಿಯಂನ ಸ್ವಚ್ಛತೆಯ ನಿರ್ವಹಣೆ ಕೊಂಚ ಕಷ್ಟವಾಗಬಹುದು.