ಅಂಕೋಲಾ: ತಾಲೂಕಿನ ಹೊಸಗದ್ದೆ ಜನತಾ ಕಾಲೋನಿಯ ಕೊಂಕಣ ರೈಲ್ವೆ ಹಳಿ ಬದಿಯಲ್ಲಿ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹಳೇ ಹುಬ್ಬಳ್ಳಿ ಮೂಲದವನಾಗಿದ್ದು ಸ್ಥಳೀಯ ಕಾಲೇಜಿನ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಸೃಜನ್ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಅಂಕೋಲಾ ಹೊಸಗದ್ದೆಯಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬಸ್ಥರೊಂದಿಗೆ ಬಂದಿದ್ದ ಈತ ಕಳೆದ ಮೂರ್ನಾಲ್ಕು ದಿನಗಳಿಂದ ಹೊಸಗದ್ದೆಯಲ್ಲೇ ಇದ್ದ ಎನ್ನಲಾಗಿದೆ. ರೈಲ್ವೆ ಹಳಿ ಪಕ್ಕದಲ್ಲಿ ಇಯರ್‌ಫೋನ್, ಜಖಂಗೊಂಡಿರುವ ಮೊಬೈಲ್ ಸ್ಕ್ರೀನ್ ಗಾರ್ಡ್ ಪತ್ತೆಯಾಗಿದ್ದು ಹಳಿ ದಾಟುವಾಗ ಅಥವಾ ಪಕ್ಕದಲ್ಲಿ ನಡೆಯುವಾಗ ರೈಲು ಬಡಿದು ಈ ದುರ್ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.