ಶಿರಸಿ: ಒಂದೆಡೆ ಪಂಚರತ್ನ ಯಾತ್ರೆ ನಡೆಯುತ್ತಿದ್ದರೆ ಇನ್ನೊಂದೆಡೆ ಚುನಾವಣಾ ಕೆಸರೆರಚಾಟ ಮುಂದುವರೆದಿದೆ. ಕುಮಾರಸ್ವಾಮಿದು ಹೇಳೋಕೆ ಬಂದ್ರೆ ಬೇಕಾದಷ್ಟು ಆಗುತ್ತೆ. ವೆಸ್ಟ್ ಎಂಡ್ ಹೋಟೆಲ್ ಯಾತ್ರೆ ನೋಡಿದ್ದೀವಿ. ತನ್ನ ಚಟ ಬಿಟ್ಟು ಬೇರೆಯವರಿಗೆ ಗಾಂಧೀಜಿ ಬುದ್ದಿಮಾತು ಹೇಳಿದ್ರಂತೆ. ಅದೇ ರೀತಿ ಇವರಿಗೆ ಇರೋ ಚಟ ಮೊದ್ಲು ಬಿಡ್ಲಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಎಚ್ ಡಿಕೆ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಸಚಿವರು, ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 25 ವರ್ಷ ಆಗಿರ್ಬೇಕು, ತಲೆ ಸರಿ ಇರ್ಬೇಕು. ಎಲೆಕ್ಷನ್ ನಲ್ಲಿ ಗೆದ್ದು ಬಂದು ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದರು.

RELATED ARTICLES  ಇಂದಿನ(ದಿ-30/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ನಮ್ಮ ಪಕ್ಷದ ಮುಖ್ಯಮಂತ್ರಿ ನಿರ್ಧರಿಸೋಕೆ ಕುಮಾರಸ್ವಾಮಿ ಯಾರು? ನಮ್ಮ ಪಕ್ಷದ ಬಗ್ಗೆ ಮಾತಾಡೋಕೆ ಅನ್ನಿಗೆ ಏನು ನೈತಿಕ ಹಕ್ಕಿದೆ ಚುನಾವಣೆಯಲ್ಲಿ ಗೆದ್ದು ಬಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ನಿರ್ಧಾರ ಮಾಡೋದು. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡೋದನ್ನು ನಾನು ಖಂಡಿಸುತ್ತೇನೆ ಎಂದರು.

RELATED ARTICLES  ಇಹ ಲೋಕ ತ್ಯಜಿಸಿದ ಕವಯತ್ರಿ ಕಲಾ ಭಟ್ : ಗಣ್ಯರರಿಂದ ಅಂತಿಮ ದರ್ಶನ


ಇನ್ನು ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಕೆ.ಪಿ.ಎಸ್.ಸಿ. ಮೂಲಕ ಸದ್ಯ ಸಿಬ್ಬಂದಿ ನೇಮಕ ಕಾಲ್ ಫಾರ್ ಆಗುತ್ತೆ. 6000 ಡಿಪ್ಲೊಮಾ ಆದವರನ್ನು ಹೊರಗುತ್ತಿಗೆ ಮೇಲೆ ತಗೊಳೋಕೆ ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳಲ್ಲಿ ಅನುಮತಿ ಕೇಳಿದ್ದೇವೆ. ಅನುಮತಿ ಸಿಕ್ಕ ತಕ್ಷಣ ನೇಮಕಾತಿ ಮಾಡಲಿದ್ದೇವೆ. 55% ಸಿಬ್ಬಂದಿ ಕೊರತೆ ಇರೋದು ನಿಜ ಎಂದು ಸಿಬ್ಬಂದಿ ಕೊರತೆ ಇರೋದನ್ನ ಬಿ.ಸಿ. ಪಾಟೀಲ್ ಒಪ್ಪಿಕೊಂಡರು.