ಗೋಕರ್ಣ: ತಾಲೂಕಿನ ಹಿರೇಗುತ್ತಿಯ 29 ವರ್ಷದ ಗಣಪತಿ ದಂಡು ಪಟಗಾರ ಅವರು ಕಳೆದ ಮಂಗಳವಾರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತ ನಡೆದಾಗ ತೀವ್ರ ಗಾಯಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ಚಿಕಿತ್ಸೆ ಫಲಿಸಲದೆ ಕೊನೆಯುಸಿರೆಳೆದರು. ಹಿರೇಗುತ್ತಿಯಲ್ಲಿ ಚಿಕನ್ ಸ್ಟಾಲ್ ಹೊಂದಿದ್ದ ಅವರು ಸುತ್ತಲಿನ ಜನರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ತರುಣರಾಗಿದ್ದರು. ಅವರು ತಂದೆ, ತಾಯಿ, ಕುಟುಂಬದವರನ್ನು ಅಗಲಿದ್ದಾರೆ. ಉತ್ತರ ಕನ್ನಡದಲ್ಲಿ ತುರ್ತು ಚಿಕಿತ್ಸೆ ನೀಡಲು ಯಾವುದೇ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿದಿರುವುದು ಈ ಎಲ್ಲ ಸಾವಿಗೆ ಕಾರಣ ಎಂಬ ಮಾತುಗಳು ಸಾರ್ವಜನಿಕ ಜಾಲತಾಣಗಳಲ್ಲಿ ಪ್ರಖರವಾಗಿ ಕೇಳಿಬರುತ್ತದೆ.

RELATED ARTICLES  ನಾಪತ್ತೆಯಾಗಿದ್ದ ವ್ಯಕ್ತಿ : ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ.