ಹಳಿಯಾಳ : ಫೆ.10 ರಂದು ಹಳಿಯಾಳ ನಗರ ಬಂದ್ ಗೆ
ವಿವಿಧ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಹಳಿಯಾಳದ ಶಕ್ತಿದೇವತೆ ಗ್ರಾಮದೇವಿಗೆ ಸಂಬಂಧಪಟ್ಟ ಧಾರ್ಮಿಕ ಜಾಗದಲ್ಲಿ ಪುರಸಭೆಯವರು ನಡೆಸುತ್ತಿರುವ ಕಾಮಗಾರಿಗಳನ್ನು ವಿರೋಧಿಸಿ ಫೆ.10 ಶುಕ್ರವಾರ ಹಳಿಯಾಳ ಬಂದ್ ಕರೆ ನೀಡಲಾಗಿದೆ ಎಂದು ಹಳಿಯಾಳ ಗ್ರಾಮದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಂಗೇಶ ದೇಶಪಾಂಡೆ ತಿಳಿಸಿದ್ದಾರೆ.

RELATED ARTICLES  ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಳಿ ಸಿಕ್ತು ಕೋಟಿ ಹಣ

ಗುರುವಾರ ಸಾಯಂಕಾಲ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಗ್ರಾಮದೇವಿ ಟ್ರಸ್ಟ್ ಕಮಿಟಿ, ಸಮಕ್ತ ಭಕ್ತ ವೃಂದ, ಹಿಂದೂ ಸಂಘಟನೆಗಳು ಒಮ್ಮತದ ನಿರ್ಧಾರ ಮಾಡಿದೆ. ಅಲ್ಲದೇ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಶುಕ್ರವಾರ ಬಂದ್ ಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

RELATED ARTICLES  ಪುರಸಭಾ ವಾಹನ ಹಾಗೂ ಬೈಕ್ ನಡುವೆ ಅಪಘಾತ

ಮಧ್ಯಾಹ್ನದ ವರೆಗೂ ಎಲ್ಲರೂ ತಮ್ಮ ಅಂಗಡಿ ಮುಗ್ಗಟ್ಟು ಗಳನ್ನು ಬಂದ್ ಮಾಡಿ ಬೆಳಿಗ್ಗೆ 10 ಗಂಟೆಗೆ ಹಳಿಯಾಳದ ಗ್ರಾಮದೇವಿ ದೇವಸ್ಥಾನದಲ್ಲಿ ಸಭೆ ಸೇರಬೇಕು. ಬಳಿಕ ಅಲ್ಲಿಂದ ಪ್ರತಿಭಟನಾ ಮೇರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿ ಶಿವಾಜಿ ವೃತ್ತದಲ್ಲಿ ಬೃಹತ್ ಸಭೆ ನಡೆಯಲಿದೆ ಎಂದು ಮಂಗೇಶ ದೇಶಪಾಂಡೆ ತಿಳಿಸಿದ್ದಾರೆ.