ಮುಂಡಗೋಡ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಮುಂಡಗೋಡ ತಾಲೂಕು ಘಟಕದ ಉದ್ಘಾಟನೆ ಪಟ್ಟಣದ ಅನ್ನಪೂರ್ಣೇಶ್ವರಿ ನಗರದ ಶ್ರೀ ಇಡಗುಂಜಿ ಮಹಾಗಣಪತಿ ದೇವಸ್ಥಾನದ ನಾಗೇಶ ಪಾಲನಕರ ವೇದಿಕೆಯಲ್ಲಿ ಫೆ.೧೨ ರಂದು ಮಧ್ಯಾಹ್ನ ೪ ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು, ಸಾಹಿತಿ ನಾಗಪತಿ ಹೆಗಡೆ ಹುಳಗೋಡ ಅವರು ಹಣತೆ ಬೆಳಗಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ತಾಲೂಕಿನ ಪಾಳ ಸರಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಾಸುದೇವ ಎಸ್. ನಾಯಕ್ ಪಾಲ್ಗೊಳ್ಳಲಿದ್ದಾರೆ.

RELATED ARTICLES  ಚಿತ್ರಕಲೆಯಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ.


ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್, ಸಂಘಟನೆಯ ಯಲ್ಲಾಪುರ ತಾಲೂಕಾಧ್ಯಕ್ಷ ರಾಘವೇಂದ್ರ ಹೊನ್ನಾವರ, ಶಿರಸಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ದಾಂಡೇಲಿ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಗೌರವ ಉಪಸ್ಥಿತರಿರುವರು ಎಂದು ಹಣತೆ ಮುಂಡಗೋಡ ತಾಲೂಕು ಘಟಕದ ಅಧ್ಯಕ್ಷ ವಿನಯ ನಾಗೇಶ ಪಾಲನಕರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

RELATED ARTICLES  ತಿಂಗಳಿನಿಂದ ಕೆಟ್ಟು ನಿಂತ ಲೈಟ್! ಶಂಶುದ್ದೀನ್ ಸರ್ಕಲ್‍ ನಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ ಜನರು.