ಹಳಿಯಾಳ : ಗ್ರಾಮದೇವಿಗೆ ಸಂಬಂಧಪಟ್ಟ ಸ್ಥಳದಲ್ಲಿ, ಇಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದ ಕಾರ್ಯಕರ್ತರ ಮಾತನ್ನೂ ಲೆಕ್ಕಿಸದೆ. ಈ ಬಗ್ಗೆ ಕಳೆದ 15 ದಿನಗಳಿಂದ ವಿರೋಧ ವ್ಯಕ್ತಪಡಿಸಿ ಹಿಂದೂಪರ ಕಾರ್ಯಕರ್ತರು ಮನವಿಗಳನ್ನ ಸಲ್ಲಿಸಿದ್ದರೂ, ಪುರಸಭೆಯ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿದ್ದರೂ ಆದರೂ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಪುರಸಭೆ ಅಭಿವೃದ್ಧಿ ಕಾಮಗಾರಿಗಳನ್ನ ಮುಂದುವರಿಸಿತ್ತು ಈ ಹಿನ್ನೆಲೆಯಲ್ಲಿ ಹಳಿಯಾಳದ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಪುರಸಭೆಯಿಂದ ಕೈಗೊಳ್ಳಲಾಗುತ್ತಿದ್ದ ಅಭಿವೃದ್ಧಿ ಕಾಮಗಾರಿ ವಿರೋಧಿಸಿ ಇಂದು ಹಳಿಯಾಳ ಬಂದ್ ನಡೆಸಲಾಗಿದೆ. ಈ ವೇಳೆ ಹಿಂದೂಪರ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಈ ವೇಳೆ ತಳ್ಳಾಟ- ನೂಕಾಟ ನಡೆದಿದೆ. ಹಳಿಯಾಳದ ಪುರಸಭೆ ವ್ಯಾಪ್ತಿಯ ಮರಡಿ ಗುಡ್ಡದ ಬಳಿ ಇರುವ ಮಸೀದಿಯ ಎದುರು ಬನ್ನಿ ಮಂಟಪವಿದ್ದು, ಇಲ್ಲಿ ಪುರಸಭೆಯಿಂದ ಹಾಸು ಹುಲ್ಲು ಹಾಗೂ ಇಂಟರ್ ಲಾಕ್ ಗಳನ್ನ ಅಳವಡಿಸಲಾಗಿತ್ತು. ಆದರೆ ಈ ಅಭಿವೃದ್ಧಿ ಕಾಮಗಾರಿಗಳನ್ನ ಪುರಸಭೆಯು ಒಂದು ಕೋಮಿಗೆ ಅನುಕೂಲವಾಗುವಂತೆ ಮಾಡುತ್ತಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪಿಸಿದ್ದರು.

RELATED ARTICLES  ಬಸ್ ಇಳಿದು ಮೂತ್ರ ವಿಸರ್ಜನೆಗೆ ಹೋದಾತ ಬಾವಿಗೆ ಬಿದ್ದ..!

ಇದರಿಂದಾಗಿ ಅಸಮಾಧಾನಗೊಂಡ ಹಿಂದೂಪರ ಕಾರ್ಯಕರ್ತರು ಗ್ರಾಮದೇವಿ ಟ್ರಸ್ಟ್ ನೇತೃತ್ವದಲ್ಲಿ ನಿನ್ನೆ ರಾತ್ರಿಯೇ ಸಭೆ ಸೇರಿ ಇಂದು ಬಂದ್ ಆಚರಿಸಲು ನಿರ್ಣಯಿಸಲಾಗಿತ್ತು. ಅದರಂತೆ ಇಂದು ಹಳಿಯಾಳ ಸಂಪೂರ್ಣ ಬಂದ್ ಆಗಿದ್ದು, ಮಾಜಿ ಶಾಸಕ ಸುನೀಲ್
ಹೆಗಡೆ ಹಾಗೂ ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಪುರಸಭೆ ಕಾಮಗಾರಿ ನಡೆಸಿದ್ದ ಜಾಗಕ್ಕೆ ತೆರಳಿ ಇಂಟರ್ ಲಾಕ್ ಗಳನ್ನ ಕಿತ್ತೆಸೆದಿದ್ದಾರೆ.

RELATED ARTICLES  ಗದ್ದಲದ ನಡುವೆಯೂ ಬಜೆಟ್ ಮಂಡನೆ : ಪ್ರಮುಖ ಅಂಶಗಳು ಇಲ್ಲಿದೆ.

ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನ ತಡೆಯಲು ಯತ್ನಿಸಿದ್ದಾರೆ. ಆದರೆ ಯಾವುದೇ ಯಶಸ್ಸು ಕಂಡಿಲ್ಲ. ಪೊಲೀಸರ ಬ್ಯಾರಿಕೇಡ್ ಗಳನ್ನ ದಾಟಿ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದರೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಹಿಂದು ಸಂಘಟನೆ ಕಾರ್ಯಕರ್ತರ ಉಗ್ರ ಪ್ರತಿಭಟನೆ
ಹಿನ್ನಲೆಯಲ್ಲಿ ಹಳಿಯಾಳದಲ್ಲಿ 144 ಸೆಕ್ಷನ್ ಜಾರಿ ಮಾಡಿ
ತಹಶಿಲ್ದಾರ್ ಪ್ರಕಾಶ ಗಾಯಕವಾಡ ಆದೇಶ. ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ
ಸಮೀಪ ಒಂದು ಕಿ. ಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು,ಫೆಬ್ರವರಿ 17 ರ ವರೆಗೆ ಸೆಕ್ಷನ್ ಜಾರಿ
ಇರಲಿದೆ.