ಒಂದು ತಿಂಗಳ ಗಂಡು ನವಜಾತ ಶಿಶು 2022ರ ಡಿ. 19ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಾಪುರ ತಾಲೂಕಿನ ಗುಡ್ಡಕೊಪ್ಪಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ರಟ್ಟಿನ ಬಾಕ್ಸಲ್ಲಿ ಪತ್ತೆಯಾಗಿದೆ. ಮಗು ಕೆಲವು ಗಂಟೆಗಳ ಮೊದಲು ಜನಿಸಿದ ನವಜಾತ ಶಿಶುವಾದ ಬಗ್ಗೆ ಕಂಡು ಬಂದಿರುತ್ತದೆ. ಮಗು ಸೀಳು ತುಟಿ ಹಾಗೂ ಅಂಗವೈಕಲ್ಯತೆ ಹೊಂದಿರುತ್ತದೆ. ಪ್ರಸ್ತುತಸ್ಥಿತಿಯಲ್ಲಿ ಮಗುವು ಶಿರಸಿ ಸಹಾಯ ಟ್ರಸ್ಟ್ ದತ್ತು ಸಂಸ್ತೆಯಲ್ಲಿರುತ್ತದೆ. ಸದರಿ ಶಿಶುವಿನ ಪಾಲಕರು, ಪೋಷಕರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ಘಟಕ, ಕಾರವಾರ ಹಾಗೂ ಸಹಾಯ ಟ್ರಸ್ಟ್, ದತ್ತು ಸ್ವೀಕಾರ ಕೇಂದ್ರ ಶಿರಸಿ ಸದರಿ ಶಿಶುವಿನ ಪಾಲಕರು, ಪೋಷಕರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ಘಟಕ, ಕಾರವಾರ ಹಾಗೂ ಸಹಾಯ ಟ್ರಸ್ಟ್, ದತ್ತು ಸ್ವೀಕಾರ ಕೇಂದ್ರ ಶಿರಸಿ ಸಂಪರ್ಕಿಸಲು ಸೂಚಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-220182 8277307688ಗೆ ಸಂಪರ್ಕಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.