ಕುಮಟಾ : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ಅವರ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಫೆಬ್ರವರಿ 14 ರಿಂದ 16 ರವರೆಗೆ ನಡೆಯಲಿದೆ.
ಮಗುವಿನ ಕಲಿಕೆಯು ಸಂಪೂರ್ಣವಾಗಿ ಅನುಭವ ಜನ್ಯವಾಗಿರುವುದರ ಜತೆಗೆ ಮಗು ತನ್ನನ್ನು ತಾನು ಸ್ವತಃ ತೊಡಗಿಸಿಕೊಳ್ಳುವ ಸ್ವಕಲಿಕೆಯ ಕಾರ್ಯಕ್ರಮ ಇದಾಗಿದೆ. ಕಲಿಕೆಗೆ ಅನುಕೂಲವಾಗಬಲ್ಲ ವಿನೂತನ ಪ್ರಯೋಗಗಳನ್ನು ಮಾಡಲು ಹಾಗೂ ಮಕ್ಕಳು ಸ್ವತಃ ಮಾಡಿ, ಯೋಚಿಸಿ, ಖುಷಿಪಡುವ, ಹೊಸದನ್ನು ಹುಡುಕಿ ಕಲಿಯಲು ಪ್ರೇರೇಪಿಸುವ ಚಟುವಟಿಕೆಗಳನ್ನು ಈಗಾಗಲೇ ರೂಪಿಸಲಾಗುತ್ತಿದ್ದು ಅನೇಕ ವಿನೂತನ ಪ್ರಯೋಗಗಳಿಗೆ ಈ ಕಲಿಕಾ ಹಬ್ಬ ಸಾಕ್ಷಿ ಆಗಲಿದೆ ಎಂದು ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ ತಿಳಿಸಿದ್ದಾರೆ.
ಸಮೂಹ ಸಂಪನ್ಮೂಲ ಕೇಂದ್ರದ ಪ್ರದೀಪ ನಾಯಕ, ಜಯಶ್ರೀ ಪಟಗಾರ, ಎಸ್.ಡಿ.ಎಂ.ಸಿ ಅಧ್ಯಕ್ಷರು ಚಂದ್ರಹಾಸ ನಾಯ್ಕ, ಮುಖ್ಯಶಿಕ್ಷಕಿ ವಿಶ್ವನಾಥ ಪಟಗಾರ, ಎಸ್.ಜಿ ಹೆಗಡೆ ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಉಪನಿರ್ದೇಶಕರಾದ ಈಶ್ವರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಉಪ ನಿರ್ದೇಶಕರು ಅಭಿವೃದ್ಧಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಮೂಹ ಸಂಪನ್ಮೂಲ ಕೇಂದ್ರದವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆ ನಡೆದಿದೆ.