ಅಂಕೋಲಾ : ಪಟ್ಟಣದ ಜೈಹಿಂದ್ ಮೈದಾನದಲ್ಲಿ ನಡೆಯುತ್ತಿರುವ ಅಂಕೋಲಾ ಉತ್ಸವದ ಎರಡನೇ ದಿನದ ರಾತ್ರಿಯ ಕಾರ್ಯಕ್ರಮದಲ್ಲಿ ಗಾಯಕ ವಿಜಯ ಪ್ರಕಾಶ್ ಹಾಗೂ ಅನುರಾಧಾ ಭಟ್ ಅವರ ತಂಡ ಜನತೆಯನ್ನ ತಮ್ಮಸುಮಧುರ ಹಾಡುಗಳ ಮೂಲಕ ರಂಜಿಸುವಲ್ಲಿ ಯಶಸ್ವಿಯಾಯಿತು. ವಿಜಯ ಪ್ರಕಾಶ್ ಅವರ ಹಾಡುಗಳಿಗಂತೂ ನೆರೆದಿದ್ದ ಜನಸ್ತೋಮವೇ ತಲೆದೂಗಿದರೆ, ಯುವಕರು ಹುಚ್ಚೆದ್ದು ಕಾರ್ಯಕ್ರಮದ ಕೊನೆಯವರೆಗೂ ಕುಣಿಯುತ್ತಿದ್ದರು.

ವಿಜಯ್ ಪ್ರಕಾಶ್ ಅವರು ಕಾಂತಾರ ಸಿನಿಮಾದ ‘ಸಿಂಗಾರ ಸಿರಿಯೆ’ ಹಾಡು ಹಾಡನ್ನ ಶಾಸಕಿ ರೂಪಾಲಿಯವರಿಗೆ ಅರ್ಪಿಸಿದರು. ರೂಪಾಲಿ ಅವರ ಪುತ್ರ ಪರ್ಭತ್ ವೇದಿಕೆಯ ಮೇಲೇರಿ ತಮ್ಮತಾಯಿಗಾಗಿ ‘ಬೊಂಬೆ ಹೇಳುತೈತೆ’ ಹಾಡಿನ ಒಂದೆರಡು ಸಾಲುಗಳನ್ನ ವಿಜಯ್ ಪ್ರಕಾಶ್ ಅವರೊಂದಿಗೆ ಹಾಡಿ ಗಮನ ಸೆಳೆದರು.

RELATED ARTICLES  ಕಾರವಾರದ ಕಪ್ಪೆಗಳಿಗೆ ಗೋವಾದಲ್ಲಿ ಭಾರೀ ಬೇಡಿಕೆ: ಜಂಪಿಂಗ್ ಚಿಕನ್ ಹೆಸರಿನಲ್ಲಿ ಖಾದ್ಯ ತಯಾರಿ.

ಶಾಸಕಿ ರೂಪಾಲಿ ವೇದಿಕೆಯೇರಿದಾಗ ವಿಜಯ್ ಪ್ರಕಾಶ್ ಅವರಲ್ಲಿ ಡಾ.ರಾಜಕುಮಾರ್ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.’ ಹಾಡು ಹಾಡಲು ಕೇಳಿಕೊಂಡಿದ್ದರು. ಕಾರ್ಯಕ್ರಮದ ಮುಕ್ತಾಯದಲ್ಲಿ ವಿಜಯ್ ಪ್ರಕಾಶ್ ಅವರು ಈ ಹಾಡು ಹಾಡಿದಾಗ ಪರ್ಭತ್, ಬಿಜೆಪಿಯ ಕಾರವಾರ ಯುವಮೋರ್ಚಾದ ಅಧ್ಯಕ್ಷ ಶುಭಂ ಕಳಸ ಹಾಗೂ ಸಂಗಡಿಗರು ಹೆಜ್ಜೆ ಹಾಕಿದರು. ಇದೇ ವೇಳೆ ಶಾಸಕಿಯನ್ನೂ ಆಹ್ವಾನಿಸಿದಾಗ ಅವರು ಕೂಡ ಕೆಲವು ನಿಮಿಷಗಳ ಕಾಲ ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದರು.

RELATED ARTICLES  ಕುಮಟಾದಲ್ಲಿ ಕರಾಟೆ ಧಮಾಕಾ 2018 ಉದ್ಘಾಟನೆ.