ಕಾರವಾರ: ಕಳೆದ ಜನವರಿ 18 ರಂದು ಅಪಘಾತದಲ್ಲಿ ಗಾಯಗೊಂಡಿದ್ದ, ಸದಾಶಿವಗಡ ತಾರಿವಾಡದ ನಿವಾಸಿ ನಿವೃತ್ತ ಎ.ಎಸ್.ಐ. ಸುರೇಶ ಹರಿ ತಾಮ್(61) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತ ಪಟ್ಟಿದ್ದಾರೆ. ಇವರಿಗೆ ಕಳೆದ ಜನವರಿ 18 ರಂದು ಭದ್ರಾ ಬಾರ ಅಂಡ್ ರೆಸ್ಟೋರೆಂಟ್ ಎದುರುಗಡೆಗೆ ಮೋಟಾರ ಸ್ಕೂಟರ ಮೇಲಿಂದ ಬಿದ್ದು ತಲೆಯ ಹಿಂದಿನ ಭಾಗದಲ್ಲಿ ಪೆಟ್ಟಾಗಿತ್ತು. ಇವರಿಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಸೇರಿಸಲಾಗಿತ್ತು. ಅಲ್ಲಿಂದ ಫೆ. 7 ರಂದು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಫೆ. 11 ರಂದು ನಿಧನರಾಗಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.