ಕುಮಟಾ : ಉತ್ತರಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ವತಿಯಿಂದ ಎಪ್ರಿಲ್ ಎರಡನೇ ವಾರ ಕಾರವಾರದಲ್ಲಿ ಸಮಾಜದ ಬೃಹತ್ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ ಡಿ ಪೆಡ್ನೇಕರ್ ಹೇಳಿದ್ದಾರೆ. ಭಾನುವಾರ ಕುಮಟಾದಲ್ಲಿ ನಡೆದ ಜಿಲ್ಲಾ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಸಮಾಜ ಬಾಂಧವರ ಹಾಗೂ ಸಮಾಜಮುಖಿ ದಾನಿಗಳ ನೆರವಿನೊಂದಿಗೆ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಎರಡು ಬಾರಿ ಇಂಥಹ ಸಮ್ಮೇಳನ ನಡೆಸಲಾಗಿದ್ದು ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್. ಆರ್ ಬಂಗಾರಪ್ಪ ಅವರು ಹಾಗೂ ಗೋವಾದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಭಂಡಾರಿ ಸಮಾಜದ ರವಿ ನಾಯ್ಕ ರವರನ್ನು ಕರೆಸಿ ಅದ್ಧೂರಿಯಾಗಿ ನೆರವೇರಿಸಿರುವಂತೆಯೇ ಈ ಬಾರಿಯೂ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಜಿಲ್ಲೆಯಲ್ಲಿ ಭಂಡಾರಿ ಸಮಾಜದ ಮತದಾರರು ಅಂದಾಜು ಇಪ್ಪತ್ತೈದು ಸಾವಿರದಷ್ಟಿದ್ದು ಕಾರವಾರವೊಂದರಲ್ಲಿಯೇ ಅತಿಹೆಚ್ಚು ಜನರಿದ್ದರೂ ಇದುವರೆಗಿನ ಸರಕಾರದಲ್ಲಿ ಸಮಾಜದ ವ್ಯಕ್ತಿಗಳಿಗೆ ಯಾವುದೇ ಮಹತ್ವದ ಸ್ಥಾನಮಾನ ದೊರೆತಿಲ್ಲ.ಕಾರವಾರ ಕ್ಷೇತ್ರದಲ್ಲಿ ಬಹು ಹಿಂದೆ ಸಮಾಜದ ವೈಂಗಣಕರ್ ಅವರು ಒಂದು ಅವಧಿಗೆ ಶಾಸಕರಾಗಿದ್ದುದ್ದೇ ಹೆಮ್ಮೆ ಎಂಬಂತಾಗಿದೆ.ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚಿನವರು ಹಿಂದುಳಿದಿದ್ದಾರೆ ಹೆಚ್ಚಿನವರಿಗೆ ಸಮಾಜದ ಅಸ್ಮಿತೆಯ ಅರಿವೂ ಇಲ್ಲದಂತಾಗಿದೆ ಕಾರಣ ಒಮ್ಮೆ ಎಲ್ಲರೂ ಕಲೆತು ನಮ್ಮತನವನ್ನು ಮೆರೆಯಲು ಈ ಸಮ್ಮೇಳನ ಸಹಕಾರಿ ಆಗಲಿದೆ.
ಸಮ್ಮೇಳನವು ವ್ಯವಸ್ಥಿತವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಜಿಲ್ಲೆಯಿಂದ ಪ್ರತಿ ಮನೆಯಿಂದ ಕನಿಷ್ಟ ಒಬ್ಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ರಾಷ್ಟ್ರದ ಅನ್ಯ ಅನ್ಯ ರಾಜ್ಯಗಳಲ್ಲಿ ಇರುವ ಸಮಾಜದ ಪ್ರಮುಖರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
ಶೋಭಾಯಾತ್ರೆ, ಸ್ಮರಣಸಂಚಿಕೆ ಅನಾವರಣ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .ಸ್ವ ಸಮಾಜದ ದಾನಿಗಳು ಸಹಕರಿಸುವ ಭರವಸೆ ನೀಡಿರುವುದಲ್ಲದೇ ನಮ್ಮ ಸಮಾಜದೊಂದಿಗೆ ಅನ್ಯೋನ್ಯತೆ ಹೊಂದಿರುವ ಅನ್ಯ ಸಮಾಜದವರೂ ನಮಗೆ ಸರ್ವರೀತಿಯಲ್ಲಿಸಹಕಾರ ನೀಡಲಿದ್ದಾರೆ ಎಂದು ಪೆಡ್ನೇಕರ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಭಂಡಾರಿ ಶಿರಸಿ ಜಿಲ್ಲಾ ಉಪಾಧ್ಯಕ್ಷರುಗಳಾದ ಸದಾನಂದ ಮಾಂಜ್ರೇಕರ್ ಕಾರವಾರ ಮತ್ತು ಕಾಗಾಲ ಚಿದಾನಂದ ಭಂಡಾರಿ ,ಮಹಿಳಾ ಸಂಘದ ಪ್ರಮುಖರಾದ ಛಾಯಾ ಜಾವ್ಕರ್,ಸೂಷ್ಮಾ ಗಾಂವ್ಕರ್.ಕಾರವಾರ ತಾಲೂಕಾ ಅಧ್ಯಕ್ಷ ಮೋಹನ ಕಿಂದಳಕರ್,ಕುಮಟಾ ತಾಲೂಕಾ ಅಧ್ಯಕ್ಷ ಶ್ರೀಧರ ಬೀರಕೋಡಿ ,ಯಲ್ಲಾಪುರದ ಅಧ್ಯಕ್ಷ ಪ್ರೇಮಾನಂದ ನಾಯ್ಕ, ಅರುಣ ಮಣಕೀಕರ್ ಕುಮಟಾ,ಅನಿಲ್ ಶಿರೋಡ್ಕರ್ ದೀವಗಿ, ,ಶಿರಸಿಯ ಜಗದೀಶ ಭಂಡಾರಿ ಜಗನ್ನಾಥ ಡಿ ದೇಶಭಂಡಾರಿ, ಹೊನ್ನಾವರ ತಾಲೂಕಾ ಸಂಘದ ಶ್ರೀಪಾದ ಭಂಡಾರಕರ್ ,ಬಾಬು ಭಂಡಾರಿ ಹೊಳೆಗದ್ದೆ,ಪರಮೇಶ್ವರ ಟಿ ದೇಶಭಂಡಾರಿ ಮಲ್ಲಾಪುರ ಕಾರವಾರದ ಶಾಂತಾರಾಮ ಥಾಮ್ಸೆ,ವಿಜು ಕಾಂಬಳೆ,ಪ್ರವೀಣ ಮಾಂಜ್ರೇಕರ್,ಅರವಿಂದ ಕಲ್ಗುಟ್ಕರ್ ,ಮಹೇಶ ಥಾಮ್ಸೆ ಕುಮಟಾದ ಜಯವಂತ ಭಂಡಾರಿ ,ರಮೇಶ ಭಂಡಾರಿ,ಅಶೋಕ ಭಂಡಾರಿ ಗೌರೀಶ ಭಂಡಾರಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.