ಅಂಕೋಲಾ : ಹಾರವಾಡದಲ್ಲಿ ಬೀಸು ಬಲೆಯ ಮೂಲಕ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಸಂಭವಿಸಿದೆ. ಕಾರವಾರ ತಾಲೂಕಿನ ಚಿತ್ತಾಕುಲ ಸೀಬರ್ಡ್ ನಿರಾಶ್ರಿತರ ಕಾಲನಿ ನಿವಾಸಿ ವಾಸು ಪಾಂಡುರಂಗ ಹರಿಕಂತ್ರ ಮೃತ ದುರ್ದೈವಿಯಾಗಿದ್ದಾನೆ.

ಮೀನುಗಾರಿಕೆಗೆ ತೆರಳಿದ್ದ ತನ್ನ ಅಣ್ಣ ರಾತ್ರಿಯಾದರು ಮನೆಗೆ ಮರಳದಿರುವುದರಿಂದ ಕಂಗಾಲಾದ ಆತನ ಸಹೋದರಿ ಮತ್ತು ಕುಟುಂಬಸ್ಥರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ಕತ್ತಲಾದ್ದರಿಂದ ಪ್ರಯೋಜನವಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಆತ ಮೃತ ದೇಹವಾಗಿ ಪತ್ತೆಯಾಗಿದ್ದಾನೆ. ಈತ ಕೆಲವು ದಿನಗಳ ಹಿಂದಷ್ಟೇ ಈಶ್ವರ ದೇವಸ್ಥಾನದ ಜಾತ್ರೆಗೆಂದು ಹಾರವಾಡದ ತನ್ನ ತಂಗಿಯ ಮನೆಗೆ ಬಂದಿದ್ದ ಎನ್ನಲಾಗಿದೆ.

RELATED ARTICLES  ಯಕ್ಷಗಾನ ಕಲಾರಂಗದ ಅರ್ಥಧಾರಿ ಪ್ರಶಸ್ತಿಗೆ ಮೇರು ವಿದ್ವಾನ್ ಉಮಾಕಾಂತ್ ಭಟ್ ಕೆರೇಕೈ ಆಯ್ಕೆ

ಸಮುದ್ರದ ಅಲೆಗಳ ಏರಿಳಿತಕ್ಕೆ ಸಿಲುಕಿ, ಹಾರವಾಡದ ಗಾಬೀತವಾಡದ ಗಜನಿ ಪ್ರದೇಶದ ಬಳಿ ಶವ ಕಂಡುಬಂದಿದೆ. ಅಂಕೋಲಾ ಪೊಲೀಸ್ ನಿರೀಕ್ಷಕರಾದ ರಾಬರ್ಟ್ ಡಿಸೋಜ, ಉಪ ನಿರೀಕ್ಷಕರಾದ ಕುಮಾರ್ ಕಾಂಬಳೆ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES  ದೇಶಪಾಂಡೆ ಸಾಹೇಬರು ಸ್ವಂತ ಖರ್ಚಿನಿಂದ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಿಸಲಿ ಅನಂತಮೂರ್ತಿ ಹೆಗಡೆ ವಿನಂತಿ.