ಹೊನ್ನಾವರ: ನಿಂತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಳದಿಪುರ ಅಗ್ರಹಾರದ ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಮಹೇಶ ಹರಿಶ್ಚಂದ್ರ ಗೌಡ (28) ಸ್ಥಳದಲ್ಲಿ ಮೃತ ಪಟ್ಟ ವ್ಯಕ್ತಿ. ಹಳದಿಪುರದಿಂದ ಸಾಲಿಕೇರಿ ಕಡೆಗೆ ಬೈಕ್ ಚಲಾಯಿಸಿ ಕೊಂಡು ಬರುತ್ತಿದ್ದಾಗ ಆಕಳು ಅಡ್ಡ ಬಂದು ತಪ್ಪಿಸಲು ಹೋಗಿ ನಿಂತ ಲಾರಿಗೆ ಹಿಂಬದಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ತಲೆಗೆ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.