ಅಂಕೋಲಾ: ತಾಲೂಕಿನ ಬೆಳಾಂಬರದ ಮಂಜುನಾಥ ನಾಯ್ಕ ಅವರ ಮನೆಯ ಸಮೀಪ ಕಾಗೆಯ ತಲೆ ಭಾಗವನ್ನು ಹಾವು ನುಂಗಿದ ಪರಿಣಾಮ ಕಾಗೆಯ ಕೊಕ್ಕು ಹಾವಿನ ಗಂಟಲಿನಿಂದ ಹೊರ ಬಂದು ಬಾಯಿ ಹರಿದು ಜೀವನ್ಮರಣದ ಮಧ್ಯೆ ನರಳಾಟ ನಡೆಸುತ್ತಿದ್ದ ಹಾವನ್ನು ಉರಗ ರಕ್ಷಕ ಮಹೇಶ ನಾಯ್ಕ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಬೇಳಾ ಬಂದರಿನಲ್ಲಿ ಕಾಗೆಯನ್ನು ಕೊಂದು ಅದರ ತಲೆ ಭಾಗ ಹಾವು ನುಂಗಲಾರಂಭಿಸಿತ್ತು. ಅಷ್ಟರಲ್ಲಿಯೇ ಮಂಜುನಾಥ ನಾಯ್ಕರು ಅದನ್ನು ಗಮನಿಸಿ ಉರಗ ರಕ್ಷಕ ಮಹೇಶ ನಾಯ್ಕರನ್ನು ಸ್ಥಳಕ್ಕೆ ಕರೆಯಿಸಿ ನರಳಾಟ ನಡೆಸುತ್ತಿದ್ದ ಹಾವನ್ನು ರಕ್ಷಣೆ ಮಾಡಿರುತ್ತಾರೆ. ಕಾಗೆ ಕೊಕ್ಕಿನಿಂದ ಬಾಯಿ ಹರಿದ ಹಾವನ್ನು ಉಪಚರಿಸಿ ಕಾಡಿಗೆ ಬಿಟ್ಟಿದ್ದಾರೆ.