ಕಾರವಾರ : ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಅವಿತುಕೊಂಡಿದ್ದ ಜೋಡಿ ನಾಗರ ಹಾವನ್ನ ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಕಾರವಾರ ತಾಲೂಕಿನ ಮಲ್ಲಾಪುರದ ಲಕ್ಷಿನಗರದ ರಾಮು ಎನ್ನುವವರ ಮನೆಯಲ್ಲಿ ಹದಿನೈದು ದಿನಗಳಿಂದ ಎರಡು ಹಾವುಗಳು ಅವಿತುಕೊಂಡಿದ್ದು, ಸೆರೆ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಸತತವಾಗಿ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಜೋಡಿ ನಾಗರ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

RELATED ARTICLES  ಗೋ ಮಾಂಸ ರಪ್ತಿನಲ್ಲಿ ನಂ2 ಆಗಲಿದೆಯೇ ಭಾರತ! ಹೊರಬಿದ್ದ ಸ್ಪೋಟಕ ವರದಿಯಲ್ಲಿ ಇರೋದೇನು ಗೊತ್ತಾ?

ಆದರೆ ಈ ವೇಳೆ ಹಾವುಗಳ ಗಾತ್ರ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಒಂದು ನಾಗರಹಾವು ಸುಮಾರು 6.6 ಅಡಿ ಗಾತ್ರದ್ದಾಗಿದ್ದು ವಿಶೇಷವಾಗಿತ್ತು. 5ರಿಂದ 5.5 ಅಡಿ ಗಾತ್ರದ ನಾಗರಹಾವುಗಳು ಈ ಭಾಗದಲ್ಲಿ ಕಾಣಸಿಗುವುದು ಸಾಮಾನ್ಯ ಆದರೆ 6.6 ಅಡಿ ಗಾತ್ರದ ನಾಗರ ಸಿಕ್ಕಿದ್ದು ಬಹಳ ಅಪರೂಪವಾಗಿದೆ. ಅರಣ್ಯ ಅಧಿಕಾರಿಮಧುಕುಮಾರ್ ಡಿ.ಎಚ್., ಉಪವಲಯ ಅರಣ್ಯಾಧಿಕಾರಿ ಆನಂದ್ ಬಜರಂಗ್ ಮತ್ತು ಅರಣ್ಯ ರಕ್ಷಕ ಅಬ್ದುಲ್ ಅವರ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ.

RELATED ARTICLES  ಗಣಪತಿಗೆ ಇದೆ ಹತ್ತಾರು ಅವತಾರ