ಭಟ್ಕಳ: ಮಾನಸಿಕ ಒತ್ತಡಕ್ಕೆ ಸಿಲುಕಿದ ವ್ಯಕ್ತಿಯೋರ್ವ
ಚಲಿಸುತ್ತಿರುವ ರೈಲಿಗೆ ತಲೆಯೊಡ್ಡಿ ಸಾವನ್ನಪ್ಪಿರುವ
ಘಟನೆ ತಾಲೂಕಿನ ಶಿರಾಲಿ ಗ್ರಾಪಂ ಚಿತ್ರಾಪುರ ರೇಲ್ವೇ ನಿಲ್ದಾಣದ ಸಮೀಪ ನಡೆದಿದೆ. ಮೃತರನ್ನು ತಾಲೂಕಿನ
ಮೂಡಶಿರಾಲಿಯ ನಿವಾಸಿ ವಾಸು ಬೆರ್ಮು ನಾಯ್ಕ (37) ಎಂದು ಗುರುತಿಸಲಾಗಿದೆ. ರೈಲು ದೇಹದ ಮೇಲೆ ಹರಿದ ಪರಿಣಾಮ ದೇಹ ಛಿದ್ರಗೊಂಡಿದೆ. ರುಂಡ ಮುಂಡಗಳು ಬೇರಾಗಿ ನೋಡುಗರಲ್ಲಿ ಭಯ ಹುಟ್ಟಿಸಿದೆ ಎನ್ನಲಾಗಿದೆ.
ಮಂಗಳೂರಿನಿಂದ ಮುಂಬಯಿ ಮಾರ್ಗವಾಗಿ ರೈಲು ಪ್ರಯಾಣ ಬೆಳೆಸಿತ್ತು ಎಂದು ತಿಳಿದು ಬಂದಿದೆ. ಗ್ರಾಮೀಣ ಠಾಣಾ ಸಿಪಿಐ ಚಂದನ ಗೋಪಾಲ, ರೇಲ್ವೆ ಪಿಎಸ್‌ಐ ಜಸ್ಟಿನ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಬಂಧ ಮೃತರ ಸಹೋದರ ಗೋಪಾಲ ನಾಯ್ಕ ದೂರು ನೀಡಿದ್ದು, ಪಿಎಸ್‌ಐ ಶ್ರೀಧರ ನಾಯ್ಕ ತನಿಖೆ ಕೈಗೊಂಡಿದ್ದಾರೆ.