ಕಾರವಾರ: ಅಪರಿಚಿತ ಕಾರು ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ತೀವ್ರ ಗಾಯಗೊಳಿಸಿದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರದೀಪ ಬಾಬು ನಾಯ್ಕ ಗಾಯಗೊಂಡಿದ್ದಾರೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ನಂತರ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬವು ತುಂಡಾಗಿ, ವಿದ್ಯುತ್ ತಂತಿಯು ಹರಿದು ಮೋಟಾರ ಸೈಕಲ್ ಸವಾರನ ಕುತ್ತಿಗೆ, ಕಣ್ಣು ಮತ್ತು ಎಡಗೈ ಮೇಲೆ ಬಿದ್ದು ಬೈಕ್ ಸವಾರ ತೀವ್ರ ಗಾಯಗೊಂಡಿದ್ದು, ಗಾಯಗೊಂಡ ಬೈಕ್ ಸವಾರನ ಸಹೋದರ ಗೋಪಿಶಿಟ್ಟಾ, ದೇಗಣಿವಾಡಾ ವಿಠಲರಾಯ ಬಾಬು ನಾಯ್ಕ ಎನ್ನುವವರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಾರು ಚಾಲಕನ ವಿರುದ್ಧ ದೂರು ನೀಡಿದ್ದಾರೆ.