ಕಾರವಾರ: ಕಳೆದ ಫೆ. 3 ರಂದು ಮಾಜಾಳಿ ತನಿಖಾ ಠಾಣೆ ಬಳಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಮಾಜಾಳಿಯ ಗಾಬಿತವಾಡಾದ ಸೈರು ಅರ್ಜುನ ಗಾಂವಕರ (57) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಗೊಟ್ಟೇಭಾಗ, ಗಾಬಿತವಾಡಾದ ಅಭಿಷೇಕ ನಾರಾಯಣ ಮೇಥಾ (27) ಎನ್ನುವವರ ಬೈಕ್‌ ಹಿಂಬದಿಯಲ್ಲಿ ಕುಳಿತು ಸೈರು ಅರ್ಜುನ ಗಾಂವಕರ ಪ್ರಯಾಣಿಸುತ್ತಿದ್ದರು. ಗೋವಾ ಕಡೆಯಿಂದ ಏಕಮುಖ ಸಂಚಾರದಲ್ಲಿ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮಾಜಾಳಿ ತನಿಖಾ ಠಾಣೆಯಲ್ಲಿರುವ ಕಬ್ಬಿಣದ ಗೇಟ್ ಬೈಕಿನ ಹಿಂಬದಿ ಸವಾರ ಸೈರು ಅರ್ಜುನ ಗಾಂವಕರ ಮೂಗಿನ ಹತ್ತಿರ ಮತ್ತು ಹಣೆಯ ಭಾಗಕ್ಕೆ ತಾಗಿ ಗಂಭೀರ ಗಾಯವಾಗಿತ್ತು. ಇವರನ್ನು ಗೋವಾದ ಬಾಂಬೋಲಿಯಮ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ಬೈಕ್ ಸವಾರ ಆಭೀಷೇಕ ಮೇಥಾ ವಿರುದ್ಧ ಸೈರು ಪುತ್ರ ಶರಣಂ ಸೈರು ಗಾಂವಕರ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ..!