ಕುಮಟಾ : ಅಶ್ವಥ್ ನಾರಾಯಣ ಅವರು ಮಾನಸಿಕ ಅಸ್ವಸ್ಥ ನಾರಾಯಣ ಎಂದು ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿ ಕರಾವಳಿ ಪ್ರಜಾದ್ವನಿ ಯಾತ್ರೆ ಹಿನ್ನೆಲೆ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು ,ಮಾನಸಿಕ ಅಸ್ವಸ್ಥ ನಾರಾಯಣ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು.ಏಷ್ಯಾದ ಅತಿದೊಡ್ಡ ಮೆಂಟಲ್ ಆಸ್ಪತ್ರೆ ಬೆಂಗಳೂರಿನಲ್ಲಿದೆ, ಅಲ್ಲಿಗೆ ಸೇರಿಸಿ ಸರಿ ಮಾಡಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

RELATED ARTICLES  ಎರಡು ಬೋಟ್ ಗಳು ಮುಳುಗಡೆ : ಮೀನುಗಾರರ ರಕ್ಷಣೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಅಂತಾ ಮಾತನಾಡುತ್ತಾರೆ, ಇಂತವರನ್ನ ಮಾನಸಿಕ ಅಸ್ವಸ್ಥ ಅಂತ ಕರಿಬೇಕು ಎಂದಿದ್ದಾರೆ. ನಳಿನಕುಮಾರ ಕಟೀಲ್ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ.ಬಿಜೆಪಿಗರ ಮನೆ ದೇವರೇ ಸುಳ್ಳು. ಮಾತು ಎತ್ತಿದ್ರೆ ಸುಳ್ಳು, ದ್ವೇಷ ಮಾಡುತ್ತಾರೆ.ಬಿಜೆಪಿಗೆ ಜನರ ಅಭಿವೃದ್ಧಿ ಬೇಕಿಲ್ಲ ಕೇವಲ ಕೋಮು ದ್ವೇಷ ಬೇಕಾಗಿದೆ. ಬಾಯಿ ಮಾತಿಗೆ ಮಾತ್ರ ದೇಶ ಭಕ್ತಿ ಅಂತಾರೆ, ಇವರದು ದ್ವೇಷ ಭಕ್ತಿ ಎಂದು ಕಿಡಿಕಾರಿದ್ದಾರೆ.

RELATED ARTICLES  ಕುಮಟಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಮಹಾಬಲಮೂರ್ತಿ ಕೊಡ್ಲೆಕೆರೆಯವರಿಗೆ ಆತ್ಮೀಯ ಸ್ವಾಗತ.