ಕಾರವಾರ: ಲಾರಿ ತಾಗಿ ವಿದ್ಯುತ್ ಕಂಬವೊಂದು ಮುರಿದು ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಡ್ಜ್ ಬಳಿ ನಡೆದಿದೆ.
ಹೆದ್ದಾರಿಯ ಫ್ಲೈಓವರ್ ಮೇಲಿಂದ ಸುರಂಗದತ್ತ ಅಗಮಿಸುತ್ತಿದ್ದ ಲಾರಿಯು ಫ್ಲೈಓವರ್‌ನಿಂದ ಬೈತಖೋಲದತ್ತ ತೆರಳಲು ತಿರುವು ತೆಗೆದುಕೊಳ್ಳುವ ವೇಳೆ ಲೈಟ್ ಕಂಬಕ್ಕೆ ತಾಗಿದೆ. ಇದರಿಂದಾಗಿ ಲೈಟ್ ಕಂಬ ಮುರಿದು ಪಕ್ಕದ ಹೆದ್ದಾರಿಯಿಂದ ಸುರಂಗ ಮಾರ್ಗದತ್ತ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಕಾರಿನ ಮೇಲ್ಭಾಗ ಜಖಂಗೊಂಡಿದೆ.
ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರ ಠಾಣಾ ಪೊಲೀಸರು ಮುರಿದು ಬಿದ್ದ ಲೈಟ್ ಕಂಬ ತೆರವಿಗೆ ಕ್ರಮ ಕೈಗೊಂಡಿದ್ದಾರೆ.

RELATED ARTICLES  'ವಿಶ್ವದರ್ಶನ ಸೇವಾ' ಆಯೋಜಿಸಿರುವ ಯೋಗ ಶಿಬಿರಕ್ಕೆ ಚಾಲನೆ