ಹೊನ್ನಾವರ: ಇಲ್ಲಿಯ ಎಂಪಿಇ ಸೊಸೈಟಿಯ ಎಸ್‌ಡಿಎಂ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್)ಯಿಂದ ‘ಎ+’ ಮಾನ್ಯತೆ ಪಡೆದಿದೆ. ಪ್ರಸ್ತುತ ಉನ್ನತ ಶ್ರೇಣಿಯೊಂದಿಗೆ ‘ಎ+’ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಪೀರ್ ಟೀಮ್ ವರದಿ ಹಾಗೂ ಉಳಿದ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪರಿಶೀಲಿಸಿ 3.47 ಸಿಜಿಪಿಎ ಅಂಕಗಳೊಂದಿಗೆ ‘ಎ+’ ಶ್ರೇಣಿಯ ಮಾನ್ಯತೆ ನೀಡಲಾಗಿದೆ. ಪ್ರಸ್ತುತ ಮಾನ್ಯತೆ 5 ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ನ್ಯಾಕ್ ಕಮಿಟಿ ಕಾಲೇಜಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದೆ.

RELATED ARTICLES  ಕುಮಟಾ ಹೊನ್ನಾವರದಲ್ಲಿ ಜನತೆಯ ನಾಯಕರೇ ಬಿಜೆಪಿ ಟಿಕೆಟ್ ಪಡೆದುಕೊಳ್ಳುತ್ತಾರೆ!


ಕಾಲೇಜು ಮೊದಲು ಮೂರು ಬಾರಿ ನ್ಯಾಕ್‌ನಿಂದ ಮೌಲ್ಯಮಾಪನಕ್ಕೆ ಒಳಗಾಗಿದ್ದು, ಪ್ರತಿ ಬಾರಿಯೂ ‘ಎ’ ಶ್ರೇಣಿಯ ಮಾನ್ಯತೆ ಪಡೆದಿತ್ತು. ಪ್ರಸ್ತುತ ಎ+ ಶ್ರೇಣಿಯ ಮಾನ್ಯತೆಯೊಂದಿಗೆ ಕಾಲೇಜು ತನ್ನ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೇರಿಸಿಕೊಂಡOತಾಗಿದೆ. ಕಾಲೇಜು ಎ+ ಮಾನ್ಯತೆ ಪಡೆಯಲು ಕಾರಣರಾದ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಪೂರ್ವ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಎಂದು ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ತಿಳಿಸಿದ್ದಾರೆ.

RELATED ARTICLES  ನಿರಂತರ ಓದು ಮತ್ತು ಕ್ರಿಯಾಶೀಲತೆ ಸಾಧನೆಯ ಮೊದಲ ಮೆಟ್ಟಿಲು : ಸಾಹಿತಿ ಸಂದೀಪ ಭಟ್ಟ ಅಭಿಮತ