ಉತ್ತರ ಕನ್ನಡ ಜಿಲ್ಲಾ ಮಟ್ಟದ ಕಲಿಕಾ ಹಬ್ಬ 2023 ಕುಮಟಾ ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಕಲಿಕಾ ಹಬ್ಬ ಮಕ್ಕಳಿಗೆ ಆಟದ ಜೊತೆ ಪಾಠವನ್ನು, ಜೀವನಾನುಭವವನ್ನು ಕಲಿಸಿದ್ದು ಜಿಲ್ಲೆಯ 300 ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಎಂಟು ಕಾರ್ನರ್ ಗಳಲ್ಲಿ ಮೂರು ದಿನಗಳ ಕಾಲ ನಡೆದ ಹಲವಾರು ಚಟುವಟಿಕೆಗಳಿಗೆ ಇಂದು ತೆರೆ ಬಿದ್ದಿತು. ಇಂದಿನ ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಈಶ್ವರ ನಾಯ್ಕ ರವರು ಭಾಗವಹಿಸಿ ವ್ಯವಸ್ಥಿತವಾದ ಅತ್ಯುತ್ತಮ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆ ನೀಡಿದ ದೊಡ್ಡ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಅದ್ದೂರಿಯಾಗಿ, ವೈಶಿಷ್ಟ್ಯ ಪೂರ್ಣವಾಗಿ ಸಂಘಟಿಸಿದ ಹೊಲನಗದ್ದೆ ಶಾಲೆಯ ಕುರಿತು ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು. ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ ರವರು ಮಾತನಾಡಿ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಸಂಘಟಿಸುವುದು ಅಷ್ಟು ಸುಲಭವಲ್ಲ ಆದರೆ ರವೀಂದ್ರ ಭಟ್ ಸೂರಿಯವರ ತಂಡ ಆ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದೆ ಯಾವುದೇ ಲೋಪದೋಷಗಳಿಲ್ಲದೆ ಮೂರು ದಿನಗಳ ಕಾಲ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಂಘಟಕರು ಅಭಿನಂದನೆಗೆ ಅರ್ಹರು ಎಂದರು. ಕಲಿಕಾ ಹಬ್ಬ ಇದರ ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀಮತಿ ಲತಾ ನಾಯಕ್ ರವರು ನಮ್ಮ ನಿರೀಕ್ಷೆಗೂ ಮೀರಿದ ಯಶಸ್ಸು ಈ ಕಾರ್ಯಕ್ರಮಕ್ಕೆ ದೊರಕಿದೆ . ಎಲ್ಲಾ ವಿಭಾಗಗಳಲ್ಲೂ ಅಚ್ಚುಕಟ್ಟಾದ ಕಾರ್ಯನಿರ್ವಹಣೆಯನ್ನು ನಾವು ಕಂಡಿದ್ದೇವೆ. ವಿಶೇಷವಾಗಿ ಈ ಶಾಲೆಯ ಶಿಕ್ಷಕರ ಸಹಕಾರ ಮನೋಭಾವನೆ, ಒಂದು ತಂಡವಾಗಿ ಕಾರ್ಯನಿರ್ವಹಣೆ ಇವೆಲ್ಲ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ. ಗ್ರಾಮೀಣ ಭಾಗದ ಶಾಲೆಯ ಮೇಲೆ ನಾವಿಟ್ಟ ಭರವಸೆ ಹುಸಿಯಾಗಿಲ್ಲ. ಈ ರೀತಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಂಘಟಕರಿಗೆ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ ಗಾಂವಕರ್ ಮಾತನಾಡಿ ಹೊಲನಗದ್ದೆ ಶಾಲೆಗೆ ಜಿಲ್ಲಾ ಮಟ್ಟದ ಕಲಿಕಾ ಹಬ್ಬದ ಸಂಘಟನೆಯ ಜವಾಬ್ದಾರಿ ನೀಡಿದ್ದು ಸಾರ್ಥಕವಾಗಿದೆ. ಆ ಶಾಲೆಯವರು ಉತ್ತಮ ಸಂಘಟಕರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಹಂತೇಶ ಹರಿಕಂತ್ರ, ಶ್ರೀಮತಿ ದೀಪಾ ಹಿಣಿ, ಶ್ರೀಮತಿ ಅನುರಾಧಾ ಭಟ್ಟ, ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶ್ರೀ ಚಂದ್ರಹಾಸ ನಾಯ್ಕ, ಜಿಲ್ಲಾ ಸಂಘದ ಪದಾಧಿಕಾರಿಗಳು, ಹೊನ್ನಾವರ ಸಂಘದ ತಾಲೂಕಾಧ್ಯಕ್ಷರಾದ ಶ್ರೀ ಎಂ.ಜಿ.ನಾಯ್ಕ, ಮುಖ್ಯಾಧ್ಯಾಪಕರಾದ ಶ್ರೀಮತಿ ಜಯಶ್ರೀ ಪಟಗಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ವೈದ್ಯ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಶಿವಾನಂದ ನಾಯಕ ಉಪಸ್ಥಿತರಿದ್ದರು.

RELATED ARTICLES  ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತೆ ಚುರುಕು: ಅಲ್ಲಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ

IMG 20230216 WA0004

ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾದ ಸಮನ್ವಯಾಧಿಕಾರಿಗಳಾದ ಶ್ರೀಮತಿ ರೇಖಾ ನಾಯ್ಕರವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿಗಳು , ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿರುವ ಗಣ್ಯರಿಗೆ ಹಾಗೂ ಅನುಷ್ಠಾನಾಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಅವರದೇ ಭಾವಚಿತ್ರವನ್ನು ಒಳಗೊಂಡ ವೈಶಿಷ್ಟ್ಯ ಪೂರ್ಣವಾದ ನೆನಪಿನ ಕಾಣಿಕೆ ಹಾಗೂ ಕಲಿಕಾ ಹಬ್ಬದ ಕ್ಯಾಲೆಂಡರ್ ಗಳನ್ನು ನೀಡಿ ಗೌರವಿಸಲಾಯಿತು. ಮಕ್ಕಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿಶೇಷವಾಗಿ ನಿರ್ಮಿಸಿದ್ದ ಸ್ಥಳೀಯ ಮೀನುಗಾರರ ಜೀವನಾಡಿಯಾದ ದೋಣಿ , ಕೃಷಿಕರ ಒಡನಾಡಿ ಎತ್ತುಗಳು, ಹಾಗೂ ನಮ್ಮ ಪಾರಂಪರಿಕ ಯಕ್ಷಗಾನದ ಫೋಟೋ ಪಾಯಿಂಟುಗಳು ಗಮನ ಸೆಳೆದವು.

RELATED ARTICLES  ಸಿದ್ದಾಪುರದಲ್ಲಿ ದೇವಾಲಯ ಕಳ್ಳತನ : ದೇವರ ಹಣ ಒಡವೆ ಎಸ್ಕೇಪ್
IMG 20230216 WA0002