ಕಾರವಾರ : ನಸುಕಿನಲ್ಲಿಯೇ ಹಬ್ಬುವಾಡಾದ ಕೆ.ಎಚ್.ಬಿ ಕಾಲನಿಯ ತಿರುವಿನ ನೇರಕ್ಕೆ ಬೆಟ್ಟದಂಚಿಗಿರುವ ಮನೆಗೆ ಚಿರತೆಯೊಂದು ನಾಯಿ ಬೇಟೆಗೆಂದು ಬಂದರೆ ಹೊರಗಡೆ ಕಪಾಟಿನಂಥ ಬಾಕ್ಸ್‌ನಲ್ಲಿ ಮಲಗಿದ್ದ ಬೆಕ್ಕನ್ನು ಕಬಳಿಸುವ ಯತ್ನದಲ್ಲಿರುವಾಗ ಜೋರಾಗಿ ಭಯದಿಂದ ಚೀರಿದ ಪರಿಣಾಮ ಮನೆಯ ಮಾಲಿಕ ವಿನೋದ ನಾಯ್ಕ ಹೊರಗೆ ಬಂದಿರುವುದು ನೋಡಿ ಪಾರಾದ ಘಟನೆ
ಜರುಗಿದೆ. ಕಳೆದ ಹಲವಾರು ವರ್ಷದಿಂದ ಇಲ್ಲಿನ ಎಲ್ಲ ನಾಯಿಗಳನ್ನು ಕಬಳಿಸಿದ ಚಿರತೆಯ ಕುರಿತು ಸುತ್ತಲಿನ ಜನ ಮಾತನಾಡುತ್ತಿದ್ದರು. ಇಲ್ಲಿನ ವಿನೋದ ವಾಚ್
ವರ್ಕ್ಸ್ ಮಾಲಿಕರಾಗಿದ್ದು, ರಸ್ತೆ ಅಂಚಿಗಿರುವ ತಮ್ಮ ಮನೆಯ ಮೂರ್ನಾಲ್ಕು ನಾಯಿ ಕಬಳಿಸಿದೆ.
ಹಿಂದೊಮ್ಮೆ ಅಂಗಳದಲ್ಲಿ ಮಲಗಿದ ತಂದೆಯ ಮೈ ಮೇಲೆ ಕಾಲಿಟ್ಟು ನಡೆದ ಚಿರತೆಯ ಘಟನೆ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ತಾವೀಗ ಮನೆ ಹೊರಗೆ ಕಬ್ಬಿಣದ ಜಾಳಿಗೆಯಲ್ಲಿ ನಾಯಿ ಹಾಕಿ ಬೀಗ ಹಾಕುವುದಾಗಿ ಹೇಳಿದ್ದಾರೆ. ಈ ಚಿರತೆ ನಸುಕಿನಲ್ಲಿ ರಸ್ತೆಗೆ ಬಂದಾಗ ಬೀದಿಯಲ್ಲಿ ಮಲಗಿದ ನಾಯಿಗಳು ವಿಕಾರವಾಗಿ ಕೂಗುತ್ತ ಚೆಲ್ಲಾಪಿಲ್ಲಿಯಾಗಿ ಓಡಿರುವ ಘಟನೆಯನ್ನು ಹತ್ತಿರದ ಮನೆಯವರು ಸ್ಮರಿಸಿಕೊಂಡಿದ್ದಾರೆ.