ಅಂಕೋಲಾ : ಕಾರವಾರ- ಅಂಕೋಲಾ ಮುಖ್ಯ ರಸ್ತೆಯ
ಅಜ್ಜಿಕಟ್ಟಾ ಬಳಿಯ ಮನೆಯೊಂದರಲ್ಲಿ ನವ ವಿವಾಹಿತನೋರ್ವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮನೋಜ್ ಶೆಟ್ಟಿ (40) ಎಂಬುವವರೆ ಮೃತವ್ಯಕ್ತಿ. ಪಟ್ಟಣದಲ್ಲಿ ಮೂರು ಕಡೆ ಬಟ್ಟೆ ಅಂಗಡಿಗಳನ್ನು ನಡೆಸುತ್ತಾ ಪ್ರತಿಷ್ಠಿತ ಕುಟುಂಬವಾಗಿ ಗುರುತಿಸಿಕೊಂಡಿದ್ದ ಶಿವಾನಂದ ಶೆಟ್ಟಿ ಅವರ ಐವರು ಮಕ್ಕಳಲ್ಲಿ ಕಿರಿಯವನಾಗಿದ್ದ ಮನೋಜ, ಕಳೆದ ಮೂರು ತಿಂಗಳ ಹಿಂದಷ್ಟೇ ಕುಮಟಾ ಬಾಡದ ಯುವತಿಯೊಂದಿಗೆ ಮದುವೆಯಾಗಿದ್ದ. ಶನಿವಾರ ಹೆಂಡತಿ ಮನೆಯಿಂದ ಹೊರಗಡೆ ಹೋದಾಗ ಮನೆಯ ಅಡಿಗೆ ಕೋಣೆಯ ಬಾಗಿಲು ಹಾಕಿಕೊಂಡು, ನೇಣು ಬಿಗಿದುಕೊಂಡು ಸಾವಿಗೆ
ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾವಿಗೆ ಶರಣಾಗುವ ಮುನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದುಬರಬೇಕಿದೆ. ಪಿಎಸೈ ಮಹಾಂತೇಶ್ ವಾಲ್ಮೀಕಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಡ ಹೆಂಡರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದು, ಹೆಂಡತಿ ಮನೆಯಿಂದ ಹೊರಗಡೆ ಹೋದಾಗ ಮನೆಯ ಅಡಿಗೆ ಕೋಣೆಯ ಬಾಗಿಲು ಹಾಕಿಕೊಂಡು, ಮನೆಯ ಮೇಲ್ಚಾವಣಿಯ ಪಕಾಸಿಗೆ ನೈಲಾನ್ ಹಗ್ಗ ಕಟ್ಟಿ,ಕುತ್ತಿಗೆಗೆ ಬಿಗಿದುಕೊಂಡು ಸಾವಿಗೆ ಶರಣಾಗಿರುವ ಸಾಧ್ಯತೆ ಬಗ್ಗೆ ಕೇಳಿ ಬಂದಿದೆ. ಸಾಂಸಾರಿಕ ಹೊಂದಾಣಿಕೆ ಕೊರತೆ, ಇಲ್ಲವೇ ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾವಿಗೆ ಶರಣಾಗುವ ಮುನ್ನ ಟೆಚ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದ್ದು, ಪೋಲಿಸ್ ತನಿಕೆಯಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.