ಅಂಕೋಲಾ: ಮನೆಯಿಂದ ಹೊರಗೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಎಲ್ಲಿಯೋ ಕಾಣೆಯಾದ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ. ಉಮಾ ನಾಯಕ (48) ಕಾಣೆಯಾಗಿರುವ ಗೃಹಿಣಿ. ಈ ಕುರಿತು ಮಹಿಳೆಯ ಪತಿ ರತೀಶ ನಾಯಕ ದೂರು ನೀಡಿದ್ದಾರೆ. ಕಳೆದ ಕೆಲವು ತಿಂಗಳಿಸಿದ ಮಾನಸಿಕ ಖಿನ್ನತೆಗೊಳಗಾಗಿ ಆಗಾಗ ಮನೆ ಬಿಟ್ಟು ಹೋಗುತ್ತೇನೆಂದು ಹೊರ ಹೋದವಳು ಸಂಜೆ ಮತ್ತೆ ಮನೆಗೆ ವಾಪಸಾಗುತ್ತಿದ್ದಳು ಎನ್ನಲಾಗಿದೆ. ಆದರೆ ಫೆ.16ರಂದು ಬೆಳಿಗ್ಗೆ ಮನೆಯಿಂದ ಹೊರಟವಳು ಇದುವರೆಗೂ ಬಾರದೆ ಎಲ್ಲಿಯೋ ಕಾಣೆಯಾಗಿದ್ದಾಳೆ.

RELATED ARTICLES  ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ.

ಕಾಣೆಯಾಗಿರುವ ಉಮಾ 5.4″ ಎತ್ತರದ ನಸುಗಪ್ಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೊರಟಾಗ ಕೇಸರಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ ತೊಟ್ಟಿದ್ದು, ಬೆನ್ನಿನ ಮೇಲೆ ಗಾಯದ ಕಲೆಯೊಂದಿದೆ. ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08388- 220333, ಮೊ.ಸಂ: 9480805250, 9480705268ಗೆ ಸಂಪರ್ಕಿಸಲು ಕೋರಲಾಗಿದೆ.

RELATED ARTICLES  ಚಾಕಲೇಟ್ ನೀಡೋದಾಗಿ ಕರೆದು ಸಲಿಂಗ ಲೈಂಗಿಕ ಕ್ರಿಯೆ ನಡೆಸಿದಾತನಿಗೆ ಶಿಕ್ಷೆ.