ಯಲ್ಲಾಪುರ: ತಾಲೂಕಿನ ಉಮ್ಮಚಗಿ ಬಳಿ ಬೈಕ್ ಸವಾರನೊಬ್ಬ ಬಿದ್ದು ತಲೆಗೆ ಬಲವಾಗಿ ಹೊಡೆತ ಬಿದ್ದ ಕಾರಣಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ಶಿರಸಿಯಿಂದ ಮಂಚಿಕೇರಿಗೆ ಪ್ರಯಾಣ ಮಾಡುತ್ತಿದ್ದ ಗಣೇಶ ಭೋವಿವಡ್ಡರ್ ಮೃತ ದುರ್ದೈವಿಯಾಗಿದ್ದಾನೆ. ಶಿವರಾತ್ರಿ ಹಬ್ಬದ ನಿಮಿತ್ತ ಗೋಕರ್ಣಕ್ಕೆ ತೆರಳಿದ್ದ ಎನ್ನಲಾಗಿದ್ದು, ಮಧ್ಯರಾತ್ರಿ ಮನೆಗೆ ಹಿಂದಿರುಗುವಾಗ ರಸ್ತೆ ಮೇಲೆ ಬಿದ್ದವನನ್ನು ಆಸ್ಪತ್ರೆಗೆ ಸಾಗಿಸುವ ಮುಂಚೆಯೇ ಮೃತನಾಗಿದ್ದಾನೆ ಎನ್ನಲಾಗಿದೆ.