ಭಟ್ಕಳ : ಭಟ್ಕಳ ತಾಲುಕಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಾಹಿತ್ಯ ಸಮ್ಮೇಳನ¸ದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಸುನೀ¯ ನಾಯ್ಕ ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ಅವರು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟನೆಮಾಡಿ ಜಿಲ್ಲೆಯ ಕ್ರಿಯಾಶಿಲ ತಾಲೂಕು ಘಟಕ ಎನಿಸಿರುವುದು ನಿಜಕ್ಕೂ ಸಂತಸದ ವಿಷಯವಾಗಿದ್ದು ಇದೀಗ ಇದೇ ಬರುವ ಮಾರ್ಚ ೧ ನೇ ತಾರೀಕಿನ ಬುಧವಾರದಂದು ಭಟ್ಕಳ ತಾಲೂಕಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುರ್ಡೇಶ್ವರದ ಆರ್.ಎನ್.ಎಸ್. ಸಭಾಭವನದಲ್ಲಿ ನಡೆಯಲಿದ್ದು ಮಾನಾಸುತ ಶಂಭು ಹೆಗಡೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಲಿದ್ದಾರೆ. ತಾಲೂಕಿನ ಎಲ್ಲ ಸಾಹಿತ್ಯಾಸಕ್ತರು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಕಾರ್ಯದರ್ಶಿ ನಾರಾಯಣ ನಾಯ್ಕ, ಕೋಶಾಧ್ಯಕ್ಷ ಶ್ರೀಧರ ಶೇಟ್, ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ ಆಚಾರ್ಯ ಉಪಸ್ಥಿತರಿದ್ದರು.

RELATED ARTICLES  'ಸಾಧನಾ ಸಂಕಲ್ಪ' ಪ್ರತಿಜ್ಞಾ ಸಮಾರಂಭ ಹಾಗೂ ಕಾಗೇರಿಯವರಿಗೆ ಸನ್ಮಾನ.