ಕುಮಟಾ : ತಾಲೂಕಿನ ಕತಗಾಲ ಸಮೀಪದ ಅಳಕೋಡ ಗ್ರಾಮದ ಶ್ರೀ ಶಂಭುಲಿಂಗ ದೇವಾಲಯದಲ್ಲಿ ಇದೇ ಫೇಬ್ರವರಿ 24 ಮತ್ತು 25 ಕ್ಕೆ ಯಾಮಾಷ್ಟಕ ಭಜನೆ ಮತ್ತು ಶ್ರೀ ಶಂಭುಲಿಂಗ ದೇವರ ಜನ್ಮೋತ್ಸವವು ನಡೆಯಲಿದೆ.
24 ಶುಕ್ರವಾರ ಬೆಳಿಗ್ಗೆ 8 ಘಂಟೆಯಿಂದ 25 ಶನಿವಾರ ಬೆಳಿಗ್ಗೆ 8 ಘಂಟೆವರೆಗೆ ಊರ ಮತ್ತು ಬೇರೆ ಬೇರೆ ಗ್ರಾಮಗಳ ಭಜಕರಿಂದ ಭಜನೆ ನಡೆಯಲಿದೆ. 25/2/23 ಶನಿವಾರ ಬೆಳಿಗ್ಗೆ ದೇವರ ಮಂಗಲ ಸ್ನಾನ,ಮಹಾಗಣಪತಿ ಅಥರ್ವಶಿರ್ಷ ಹವನ, ಶತರುದ್ರಾಭಿಷೇಕ, ದುರ್ಗಾ ಹವನ, ರುದ್ರ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ.
ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ಮಹಾಮಂಗಳಾರತಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಅರ್ಚಕರು ಮತ್ತು ಆಡಳಿತ ಸಮಿತಿಯವರು ವಿನಂತಿಸಿದ್ದಾರೆ.