ಯಲ್ಲಾಪುರ: ತಾಲೂಕಿನ ಸಂಕದಗುಂಡಿ ಬ್ರಿಡ್ಜ್ ಸಂಪೇಸರ ಕ್ರಾಸ್ ಬಳಿ ಕಾಡು ಹಂದಿಗಳು ರಸ್ತೆಗೆ ಅಡ್ಡಲಾಗಿ ಬಂದ ಕಾರಣ ಅವುಗಳನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಕಬ್ಬಿಣದ ತಡೆ ಗೋಡೆಗೆ ಬಡಿದ ಕಾರಣ ಬೈಕಿನ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಮುಂಡಗೋಡು ತಾಲೂಕಿನ ಹನುಮಾಪುರ ನಿವಾಸಿ ಗೌಂಡಿ ಕೆಲಸದ ಗಣೇಶ ತಿಮ್ಮಣ್ಣ ಬೋವಿವಡ್ಡರ್ (19) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾ ವಸ೦ತ ಭೋವಿವಡ್ಡರ್(36) ಎಂಬಾತನೇ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯಾಗಿದ್ದು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದವನು ದಾರಿ ಮಧ್ಯೆ ಕಾಡು ಹಂದಿಗಳು ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಬೈಕ್ ನಿಯಂತ್ರಿಸಲಾಗದೇ ಆಯ ತಪ್ಪಿದ್ದರಿಂದ ರಸ್ತೆ ಪಕ್ಕದಲ್ಲೇ ಇದ್ದ ಕಬ್ಬಿಣದ ಗೋಡೆಗೆ ಬಡಿದು ಹಿಂಬದಿ ಸವಾರ ಸಾವು ಕಂಡಿದ್ದಾನೆ.

RELATED ARTICLES  ಹೊರಡುವಾಗ ಹೀಗೆ ಆಗಬಾರದು! ಶಕುನಗಳು ಹೇಳೋದೇನು ಗೊತ್ತಾ?