ಕಾರವಾರ : ಬಹು ಅಪರೂಪ ಎಂದೇ ಹೇಳಬಹುದಾದ ಒಂದು ಕಣ್ಣು ಇರದ ಒಕ್ಕಣ್ಣಿನ ನಾಗಿಣಿ ಕಾಣಿಸಿಕೊಂಡು ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಘಟನೆ ವರದಿಯಾಗಿದೆ. ಈ ರೀತಿ ಒಕ್ಕಣ್ಣಿನ ನಾಗರ ಸಾಮಾನ್ಯವಾಗಿ ಕಾಣ ಸಿಗುವುದು ತೀರಾ ವಿರಳ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚುವುದರಿಂದಲೂ ಹೀಗೆ ಆಗಿರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕರು.

RELATED ARTICLES  ವಿಶೇಷವಾದ ತಾಣ ಕೆಂಕಣಿ ಶಿವಪುರಕ್ಕೆ ತೆರಳುವ ಕ್ರಾಸ್ ಗೆ ಬಿಲ್ಲುಬಾಣ ಕ್ರಾಸ್ ಎಂದು ನಾಮಕರಣ

ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ಆಕಾಶ ಎನ್.ಚೌಗ್ಲೆ ಎನ್ನುವವರ ಮನೆಯ ಬಳಿ ಸುಮಾರು 4.5 ಅಡಿಯ ಉದ್ದದ ಹಾವೊಂದು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಕದ್ರಾ ಅರಣ್ಯ ವಿಭಾಗದ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರಿಗೆ ಕರೆ ಮಾಡಿದ್ದಾರೆ . ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣನಕರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

RELATED ARTICLES  ಯಶಸ್ವಿಯಾಯ್ತು ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ.

ಇನ್ನು ಅತಿ ವಿರಳವಾಗಿ ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದಾಗಿಯೂ ಇಂತಹ ವಿದ್ಯಾಮಾನಗಳಿಗೆ ಕಾರಣವಾಗುತ್ತದೆ. ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೇನೂ ಪರಿಣಾಮ ಬೀರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.