ಹೊನ್ನಾವರ : ಕೆರೆಮನೆ ಶಿವಾನಂದ ಹೆಗಡೆಯವರಿಗೆ ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಯಕ್ಷಗಾನ ಮಹೋತ್ಸವದಲ್ಲಿ ೨೦೨೧ ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ” ನೀಡಿ ಗೌರವಿಸಿದೆ. ಯಕ್ಷಗಾನ ಕಲೆಯಲ್ಲಿ ತಮ್ಮ ಅಜ್ಜ ಶಿವರಾಮ ಹೆಗಡೆ ಹಾಗೂ ತಂದೆ ಶಂಭು ಹೆಗಡೆಯವರಂತೆ ತಮ್ಮದೆ ಆದ ಛಾಪು ಮೂಡಿಸಿಕೊಂಡ ಶಿವಾನಂದ ಹೆಗಡೆಯವರಿಗೆ ೨೦೨೧ ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ” ನ್ನು ಗುಂಟೂರಿನ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಿ ಗೌರವಿಸಿದೆ. ಶಂಭು ಹೆಗಡೆಯವರ ನೆನಪಿನ ಸುಂದರ ಬಯಲು ರಂಗಮಂದಿರ ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಯ ನಾಟ್ಯೋತ್ಸವವನ್ನು ಕಳೆದ ೧೨ ವರ್ಷದಿಂದ ನಡೆಸಿಕೊಂಡು ಭಾರತೀಯ ಕಲೆಯ ಶ್ರೇಷ್ಠತೆಯನ್ನು ಎಲ್ಲಾ ಜನರಿಗೆ ಪರಿಚಯಿಸುವ ಕಾರ್ಯವನ್ನು ಕಲಾ ಕೇಂದ್ರದ ಪ್ರಸ್ತುತ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಮಾಡುತ್ತಿದ್ದಾರೆ.