ದಿನಾಂಕ 22.02.2023 ಬುಧವಾರ ಸಂಜೆ 6 ಗಂಟೆಗೆ ಮೂರೂರಿನ ಕೋಣಾರೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೂರೂರು ದೇವರು ಹೆಗಡೆ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ . ಕಾರ್ಯಕ್ರಮವನ್ನು ಉದ್ಯಮಿ ಶ್ರೀ ಮುರಳಿದರು ಪ್ರಭು ಅವರು ಉದ್ಘಾಟಿಸಲಿದ್ದು ಶ್ರೀ ವಿ ಎಸ್ ಹೆಗಡೆ ಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಡಿ.ಡಿ .ಶರ್ಮ, ಶ್ರೀ ಗೋಪಾಲಕೃಷ್ಣ ಭಾಗವತ್, ಶ್ರೀ ಗಣಪತಿ ಈಶ್ವರ ಹೆಗಡೆ ಭಾಗವಹಿಸಲಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಸತ್ಯ ಹಾಸ್ಯಗಾರ ಕರ್ಕಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಿಂದ ದಮಯಂತಿ ಪುನಃ ಸ್ವಯಂವರ ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷರಂಗದಲ್ಲಿ ತನ್ನ ಛಾಪನ್ನು ಮೂಡಿಸಿ ಯಕ್ಷಗಾನ ಪ್ರಿಯರ ಮನದಲ್ಲಿ ಮನೆ ಮಾಡಿರುವ ಶ್ರೀ ದೇವರು ಹೆಗಡೆ ಮೂರೂರು ಇವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಶ್ರೀ ದೇವರು ಹೆಗಡೆಯ ಯಕ್ಷ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ ಮೂರೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.