ಕುಮಟಾ: ಕರ್ನಾಟಕ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ಏರ್ಪಡಿಸಿದ್ದ 2022-23ನೇ ಸಾಲಿನ ಪ್ರಾಚ್ಯಪ್ರಜ್ಞೆ ಕಾರ್ಯಕ್ರಮದ ಚಿತ್ರಕಲೆ ಸ್ಪರ್ಧೆಯಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ 9ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಪಾವನಿ ಶ್ರೀಧರ ನಾಯ್ಕ ಇವಳ ಅದ್ಭುತ ಕಲಾಕುಂಚದಿಂದ ಮೂಡಿಬಂದ ಹಂಪಿ ದೇವಾಲಯ ಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಪ್ರಶಸ್ತಿಯು ಐದು ಸಾವಿರ ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ರಾಜ್ಯಾದ್ಯಂತ ಭಾಗವಹಿಸಿದ್ದ 78 ಸ್ಪರ್ಧಾರ್ಥಿಗಳಲ್ಲಿ ಈಕೆಯ ಚಿತ್ರಕಲೆಯಲ್ಲಿ ಮೂಡಿದ ನೈಜತೆ ನಿರ್ಣಾಯಕರನ್ನು ಮಂತ್ರಮುಗ್ಧರನ್ನಾಗಿಸಿತು. ಇವಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕಿಯರು, ಶಿಕ್ಷಕ ಹಾಗೂ ಪಾಲಕ ವೃಂದ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.