ಕುಮಟಾ : ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಪ್ರಿಯಾ ಶಂಕರ ಗೌಡ 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಕೀರ್ತಿಗೆ ಸುಪ್ರಿಯಾ ಗೌಡ ಪಾತ್ರಳಾಗಿದ್ದಾಳೆ. ಆಯೋಜಕರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಮೈಸೂರು ಪೇಟ ತೊಡಿಸಿ ವಿದ್ಯಾರ್ಥಿನಿಯನ್ನು ಸತ್ಕರಿಸಿದರು. ಮೈಸೂರಿನ ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಸುಪ್ರಿಯಾ ಶಂಕರ ಗೌಡ ಕುಮಟಾ ತಾಲೂಕಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಅಂತ್ರವಳ್ಳಿಯ ಗುಳ್ಳೆಬೈಲನ ಕೃಷಿಕ ಎಸ್. ಟಿ. ಗೌಡ ರವರ ಪುತ್ರಿಯಾಗಿದ್ದಾರೆ.

RELATED ARTICLES  ನೈವೇದ್ಯ ಸಮರ್ಪಣೆ ಹೀಗಿರಲಿ! ದೇವರ ಮುಂದಿಡುವ ನೈವೇದ್ಯವನ್ನು ಅಲಂಕರಿಸುವ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿನಿಗೆ ಶಾಲೆಯ ಆಡಳಿತ ಮಂಡಳಿಗೆ ಕಾರ್ಯಾಧ್ಯಕ್ಷರಾದ ಆರ್.ಜಿ.ಭಟ್ ರವರು ವಿಶೇಷ ಪ್ರೋತ್ಸಾಹ ನೀಡಿದ್ದು ದೈಹಿಕ ಶಿಕ್ಷಕ ಅರುಣ್ ನಾಯ್ಕ ಹಾಗೂ ಕಮಲಾ ಬಾಳಿಗಾ ಪ್ರ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಕರಾದ ಜಿ.ಡಿ. ಭಟ್ ಅವರು ವಿಶೇಷ ತರಬೇತಿ ನೀಡಿದ್ದರು. ವಿದ್ಯಾರ್ಥಿನಿಯ ಸಾಧನೆಗೆ ಉಪನಿರ್ದೇಶಕರಾದ ಈಶ್ವರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್, ದೈಹಿಕ ಶಿಕ್ಷಕ ಪರಿವೀಕ್ಷಕರು ಹಾಗೂ ಪ್ರಗತಿ ವಿದ್ಯಾಲಯದ ಶಿಕ್ಷಕವೃಂದ ಮತ್ತು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.

RELATED ARTICLES  25 ಅಡಿ ಆಳದ ಬಾವಿಯಲ್ಲಿ ಆಯತಪ್ಪಿ ಬಿದ್ದ ಯುವತಿ : ಕತಗಾಲಿನ ಸಾಂತೂರಿನಲ್ಲಿ ಘಟನೆ