ಯಲ್ಲಾಪುರ: ಹೊಸಳ್ಳಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಮೇಲೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಒಬ್ಬ ಗಾಯಗೊಂಡಿದ್ದು, ಇನ್ನೊಬ್ಬ ಸಾವನಪ್ಪಿದ್ದಾನೆ. ಬಾದಾಮಿ ತಾಲೂಕಿನ ನಝೀರ್‌ಸಾಬ್ ಎಂಬಾತ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ ನಿಲ್ಲಿಸಿ ಹೋಗಿದ್ದು, ಇದನ್ನು ಗಮನಿಸದ ಹಳಿಯಾಳದ ಸುಲೇಮಾನ್ ಎಂಬಾತ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆತನೊಂದಿಗೆ ಬೈಕ್ ಹಿಂಬದಿ ಕುಳಿತಿದ್ದ ಅಲ್ತಾಫ್ ರಾಜ್‌ಸಾಬ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾನೆ. ಬೈಕ್ ಓಡಿಸುತ್ತಿದ್ದ ಸುಲೇಮಾನ್ ಸಹ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದಿಂದ ಎರಡು ವಾಹನಗಳು ಜಖಂ ಆಗಿವೆ.