ಭಟ್ಕಳ : ಹಾಡವಳ್ಳಿ ನಿವಾಸಿ ಶಂಭು ಭಟ್ ( 65 ವರ್ಷ), ಪತ್ನಿ ಮಾದೇವಿ ಭಟ್ ( 40ವರ್ಷ), ಮಗ ರಾಜೀವ್ ( 34 ವರ್ಷ) ಹಾಗೂ ಸೊಸೆ ಕುಸುಮಾ ಭಟ್ ( 30 ವರ್ಷ) ಎಂಬವರೇ ಕೊಲೆಯಾದ ದುದೈವಿಗಳು. ನಾಲ್ವರನ್ನು ಕತ್ತಿಯಿಂದ ಕಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಭಟ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಭೀಕರ ಹತ್ಯೆಯ ಹಿಂದೆ ಹಲವು ಅನುಮಾನ
ಹಾಡುವಳ್ಳಿಯಲ್ಲಿರುವ ಮನೆಯ ಸಮೀಪದಲ್ಲಿಯೇ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಾಲ್ವರ ಮುಖ, ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಮಾರಕಾಸ್ತ್ರಗಳಿಂದ ಕಡಿದು ಹಾಕಲಾಗಿದೆ. ಮಾದೇವಿ ಭಟ್, ರಾಜೀವ್ ಹಾಗೂ ಕುಸುಮಾ ಭಟ್ ಅವರ ಶವಗಳು ಅಕ್ಕಪಕ್ಕದಲ್ಲಿಯೇ ಬಿದ್ದಿದ್ದರೆ, ಶಂಭು ಭಟ್ ಅವರ ಶವ ಮನೆಯಿಂದ ಸ್ವಲ್ಪ ದೂರದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕೊಲೆಯ ಬೆನ್ನಲ್ಲೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಆಸ್ತಿ ವಿವಾದಕ್ಕೆ ಈ ಕೊಲೆ ನಡೆದಿದ್ಯಾ ಇಲ್ಲಾ, ಬರೆಯ ಕಾರಣಕ್ಕೆ ನಡೆದಿದ್ಯಾ ಅನ್ನೋ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಅಕ್ಕಪಕ್ಕದವರು, ತೋಟದ ಕೆಲಸಗಾರರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಭಟ್ಕಳ ಸಮೀಪದ ಹಾಡುವಳ್ಳಿಯಲ್ಲಿ ನಡೆದಿರುವ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಇದೀಗ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಈಗಾಗಲೇ ಕೊಲೆಗಾರರಿಗೆ ಶೋಧಕಾರ್ಯ ಆರಂಭಿಸಿದ್ದಾರೆ. ನಾಕಾಬಂದಿಯನ್ನು ಹಾಕಲಾಗಿದ್ದು, ಕೊಲೆಗಾರರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಮನೆಯಲ್ಲೇ ಇದ್ರೂ ಬದುಕುಳಿದ ಮೊಮ್ಮಕ್ಕಳು !
ಶಂಭು ಭಟ್ ಅವರ ಮಗ ರಾಜೀವ ಭಟ್ ಅವರಿಗೆ ಇಬ್ಬರು ಮಕ್ಕಳಿದ್ದು, ಈ ಪೈಕಿ ಒಬ್ಬ ಶಾಲೆಗೆ ಹೋಗಿದ್ದರೆ, ಮತ್ತೊಂದು ಮಗು ಮನೆಯಲ್ಲಿ ಮಲಗಿತ್ತು. ಆದರೆ ಕೊಲೆಗಾರ ನಾಲ್ವರನ್ನು ಕೊಲೆಗೈದು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದಾಗಿ ಮಕ್ಕಳು ಬಜಾವಾಗಿದ್ದಾರೆ.
ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಭಟ್ ಕಳೆದ ಕೆಲ ತಿಂಗಳ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ನಂತರದಲ್ಲಿ ಶ್ರೀಧರ ಭಟ್ ಅವರ ಪತ್ನಿ ಆಸ್ತಿಯಲ್ಲಿ ಪಾಲು ಕೇಳಿದ್ದರು. ಶಂಭು ಭಟ್ ಅವರು ಸೊಸೆಗೆ ಆಸ್ತಿಯಲ್ಲಿ ಪಾಲು ನೀಡಿದ್ದರು. ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾ ಭಟ್ ಅವರ ಸಹೋದರ ಆಸ್ತಿಯ ಪಾಲನ್ನು ನೋಡಿಕೊಳ್ಳುತ್ತಿದ್ದು, ಇದೇ ಕಾರಣಕ್ಕೆ ಕೊಲೆ ನಡೆದಿದೆ ಅನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Source : Facebook