ಮನುಷ್ಯ ಒಮ್ಮೆ ಮರಣಿಸಿದರೆ ಮತ್ತೆ ಹುಟ್ಟುವ ಅವಕಾಶಗಳಿಲ್ಲ. ಅದೇರೀತಿ ಮಾವುದೇ ಮನುಷ್ಯನಾದರೂ ಒಂದಲ್ಲ ಒಂದು ದಿನ ಮರಣಿಸಲೇಬೇಕು. ಅವನು ಹೇಗೆ ಮರಣಿಸಿದರೂ ,ಮನುಷ್ಯನಿಗೆ ಮರಣ ಅನಿವಾರ್ಯ. ಮನುಷ್ಯ ಇಲ್ಲಿವರೆಗೂ ಎಲ್ಲ ಕ್ಷೇತ್ರಗಳಲ್ಲೂ ಅನೇಕ ಸಾಧನೆಗಳನ್ನು ಮಾಡಿದ್ದರೂ, ಮರಣವನ್ನು ಜಯಿಸುವ ಮಾರ್ಗವನ್ನು ಮಾತ್ರ ಕಂಡುಹಿಡಿಯಲಾಗಲಿಲ್ಲ. ಆದುದರಿಂದ… ಯಾರೇ ಆಗಲಿ ಒಂದು ಸಲ ಮರಣಿಸಲೇಬೇಕು. ಆದರೆ, ಹಿಂದೂ ಪುರಾಣಗಳ ಪ್ರಕಾರ ಕೆಲವರು ಹಲವಾರು ಯುಗಗಳಿಂದ ಇನ್ನೂ ಬದುಕಿದ್ದಾರಂತೆ. ಅವರು ಯಾರೆಂದು ನಿಮಗೆ ಗೊತ್ತೇ?. ಬನ್ನಿ ಅವರ್ಯಾರೆಂದು ನೋಡೋಣ..!

IMG 20171007 WA0092

ಬಲಿ ಚಕ್ರವರ್ತಿ
ವಾಮನ ರೂಪದಲ್ಲಿ ಬಂದ ಶ್ರೀ ಮಹಾವಿಷ್ಣು, ಮೂರು ಹೆಜ್ಜೆಗಳಷ್ಟು ಸ್ಥಳವನ್ನು ಕೋರಿ ವಾಮನನನ್ನು ಪಾತಾಳಕ್ಕೆ ಕಳುಹಿಸಿದ. ಆದರೆ, ವಾಮನ ಇನ್ನೂ ಬದುಕಿದ್ದಾನಂತೆ. ಪ್ರತಿ ವರ್ಷವೂ ಆತ ಪಾತಾಳದಿಂದ ಭೂಮಿಯ ಮೇಲೆ ಬರುತ್ತಾನಂತೆ. ಅದೇ ದಿನದಂದು ಕೇರಳ ರಾಜ್ಯದ ಪ್ರಜೆಗಳು ಓಣಂ ಹಬ್ಬ ವನ್ನು ಆಚರಿಸುತ್ತಾರೆ.

RELATED ARTICLES  ಹೊನ್ನಾವರ - ಭೀಕರ ಸರಣಿ ಅಫಘಾತ : ಬೆಚ್ಚಿ ಬಿದ್ದ ಜನರು : 15 ಮಂದಿಗೆ ಗಾಯ

ವಿಭೀಷಣ…
ರಾವಣನ ತಮ್ಮ ವಿಭೀಷಣ. ಈತ ರಾಮನಿಗೆ ಯುದ್ಧದಲ್ಲಿ ಸಹಾಯಮಾಡಿದ್ದನಂತೆ. ಪ್ರತಿಫಲವಾಗಿ ರಾಮ , ವಿಭೀಷಣನನ್ನು ಮೃತ್ಯಂಜಯನನ್ನಾಗಿ ಮಾಡುತ್ತಾನೆ. ಇದರಿಂದಾಗಿ ಈಗಲೂ ಸಹ ಕೆಲವು ಪ್ರದೇಶಗಳಲ್ಲಿ ವಿಭೀಷಣ ಸಂಚರಿಸುತ್ತಾನಂತೆ. ವಿಭೀಷಣನ ಗುಡಿಯೊಂದು ರಾಜಸ್ತಾನದ ‘ಕೋಟಾ’ ಪಟ್ಟಣದಲ್ಲಿದೆಯಂತೆ. ಇದು ಭಾರತದಲ್ಲಿ ವಿಭೀಷಣನಿಗಾಗಿ ನಿರ್ಮಿಸಲಾಗಿರುವ ಏಕೈಕ ದೇವಾಲಯವಂತೆ. ಇಂದಿಗೂ ಇಲ್ಲಿ ವಿಭೀಷಣ ಸಂಚರಿಸುತ್ತಿರುತ್ತಾನಂತೆ.

ಪರಶುರಾಮ…
ಶ್ರೀಮಹಾವಿಷ್ಣುವಿನ ದಶಾವತಾರಗಳಲ್ಲಿ ಪರಶುರಾಮ ಅವತಾರವೂ ಒಂದು. ಈತ 21 ಸಲ ವಿಶ್ವದಲ್ಲಿರುವ ಚಕ್ರವರ್ತಿಗಳೆಲ್ಲರನ್ನೂ ಜಯಿಸುತ್ತಾನಂತೆ. ಇದರಿಂದಾಗಿಯೇ ಶ್ರೀ ಮಹಾವಿಷ್ಣು ಈತನನ್ನು ಕಾಲಗಳ ಸಮನ್ವಯಕರ್ತನನ್ನಾಗಿ ನಿಯಮಿಸಿರುವುದಾಗಿ ಹೇಳುತ್ತಾರೆ. ಈತನೂ ಸಹ ಮೃತ್ಯುಂಜಯನೇ. ಇಂದಿಗೂ ಈತ ಬದುಕಿದ್ದ್ದಾನಂತೆ.

ವೇದವ್ಯಾಸ…
ಮಹಾಭಾರತವನ್ನು ಬರೆದ ವೇದವ್ಯಾಸರೂ ಸಹ ಮೃತ್ಯುಂಜಯರಂತೆ. ಅವರು ಇಂದಿಗೂ ಬದುಕಿದ್ದಾರಂತೆ.

RELATED ARTICLES  ನಿಮ್ಮ ಉತ್ತಮ ಆರೋಗ್ಯಕ್ಕೆ ಈ ಅಕ್ಕಿ ಬಳಸಿ.

ಅಶ್ವತ್ಥಾಮ…
ಮಹಾಭಾರತದಲ್ಲಿ ಅಶ್ವತ್ತಾಮನದೊಂದು ಮುಖ್ಯವಾದ ಪಾತ್ರ. ಈತ ನಿದ್ರಿಸುತ್ತಿರುವ ದ್ರೌಪದಿಕುಮಾರರನ್ನು ಸಾಯಿಸುತ್ತಾನೆ. ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನನ್ನೂ ಸಹ ತಾಯಿಯ ಗರ್ಭದಲ್ಲಿರುವಾಗಲೇ ಸಾಯಿಸುತ್ತಾನೆ. ಆದರೆ, ಶ್ರೀಕೃಷ್ಣ ಪರೀಕ್ಷಿತನನ್ನು ಬದುಕಿಸುತ್ತಾನೆ.. ತದನಂತರ ಶ್ರೀಕೃಷ್ಣ ಅಶ್ವತ್ಥಾಮನನ್ನು ಶಪಿಸುತ್ತಾನೆ.ಅದರ ಫಲವಾಗಿ ಅಶ್ವತ್ಥಾಮ ಇಂದಿಗೂ ಬದುಕಿದ್ದಾನಂತೆ .

ಕೃಷ್ಣಾಚಾರ್ಯ
ಪಾಂಡವರ ಹಾಗೂ ಕೌರವರ ಗುರು ಕೃಷ್ಣಾಚಾರ್ಯ. ದ್ರೋಣನಿಗೆ ಬಂಧುವಂತೆ. ಈತನಿಗೂ ಮರಣವಿಲ್ಲವಂತೆ.

ಮಾರ್ಕಂಡೇಯ ಮಹರ್ಷಿ
ಬಹಳ ಚಿಕ್ಕ ವಯಸಿನಲ್ಲಿಯೇ ಮರಣಿಸುತ್ತೇನೆಂಬುದನ್ನು ತಿಳಿದ ಮಾರ್ಕಂಡೇಯ , ತಪಸ್ಸುಮಾಡಿ ಶಿವನಿಂದ ಮೃತ್ಯುಂಜಯ ಮಂತ್ರವನ್ನು ಪಡೆಯುತ್ತಾನೆ. ಇದರಿಂದಾಗಿ ಮಾರ್ಕಂಡೇಯ ಮೃತ್ಯುಂಜಯನಾಗುತ್ತಾನೆ. ಇಂದಿಗೂ ಬದುಕಿದ್ದಾನೆಂದು ಹೇಳಲಾಗುತ್ತಿದೆ.

ಆಂಜನೇಯ ಸ್ವಾಮಿ

ಭಕ್ತರನ್ನು ಕಾಪಾಡುವ ಕಲಿಯುಗ ದೈವವಾಗಿ ಹನುಮಂತ ಹೆಸರು ಪಡೆದಿದ್ದಾನೆ. ಈತನೂ ಸಹ ಮೃತ್ಯುಂಜಯನೇ. ಮರಣ ಈತನ ಹತ್ತಿರ ಸುಳಿಯುವುದಿಲ್ಲವಂತೆ.