ಶಿರಸಿ: ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆದಿದೆ. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಶಿರಸಿಯ ಬನವಾಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿರುದ್ಧ ಪೋಸ್ಟರ್ ಗಳನ್ನ ಅಂಟಿಸಲಾಗಿದೆ. ಕಂದಬೋತ್ಸವ ಹಾಗೂ ವಿವಿಧ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಸಿದ್ದಾಪುರ ಹಾಗೂ ಶಿರಸಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಬನವಾಸಿಯ ರಸ್ತೆಯುದ್ದಕ್ಕೂ ಪೇ ಸಿಎಂ ಪೋಸ್ಟರ್
ಗಳನ್ನ ಅಳವಡಿಕೆ ಮಾಡಲಾಗಿದೆ.
ಸಿಎಂ ಸಂಚರಿಸುವ ರಸ್ತೆಬದಿಯಲ್ಲಿನ ಮರ ಹಾಗೂ ಕಟ್ಟಡಗಳಿಗೆ ಪೋಸ್ಟರ್ ಗಳನ್ನ ಅಳವಡಿಕೆ ಮಾಡಲಾಗಿದೆ. ಕಾರ್ಮಿಕ ಇಲಾಖೆಯಲ್ಲಿನ ಆಹಾರದ ಕಿಟ್ ಸ್ಕ್ಯಾಮ್ ಗೆ ಪೇ ಮಾಡಿ; ಡೀಲ್ ನಿಮ್ದು ಕಮಿಷನ್ ನಮ್ಹು ಎಂದು ಬರೆದಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪೋಟೋ ಸಹಿತದ ಪೋಸ್ಟರ್ ಅಳವಡಿಕೆಯಾಗಿದೆ, ಬಿಜೆಪಿಗರಿಗೆ ಮುಜುಗರ ತಂದಿದೆ.