ಕುಮಟಾ : ತಾಲೂಕಿನ ಹೆಗಡೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿಯವರು ಕಾಮಗಾರಿ ಉದ್ಘಾಟಿಸಿ, ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

ಪ್ರಮುಖವಾಗಿ ಹೆಗಡೆ ರೈಲ್ವೆ ಬ್ರಿಜ್ ನಿಂದ ತಣ್ಣೀರಕುಳಿ ರಸ್ತೆ ಸುಧಾರಣೆ (ಅಂದಾಜುಮೊತ್ತ 8.00 ಲಕ್ಷ), ಹೆಗಡೆ ಗೋಪಾಲಕೃಷ್ಣ ದೇವಸ್ಥಾನದಿಂದ ನಾರಾಯಣ ಗೌಡರ ಮನೆಯವರೆಗೆ ರಸ್ತೆ ಸುಧಾರಣೆ (ಅಂದಾಜುಮೊತ್ತ 20.00 ಲಕ್ಷ), ಹೆಗಡೆ ಮಾರಿಮನೆ ಶಿಣ್ಣುಮನೆವರೆಗೆ ರಸ್ತೆಸುಧಾರಣೆ ಭೂಮಿಪೂಜೆ (ಅಂದಾಜುಮೊತ್ತ 20.00 ಲಕ್ಷ), ಹೆಗಡೆ ಅಂಬಿಗರಕೇರಿ ರಸ್ತೆ ನಿರ್ಮಾಣ ಭೂಮಿಪೂಜೆ (ಅಂದಾಜುಮೊತ್ತ 10.00 ಲಕ್ಷ), ಕಾಸಿನಗುಂಡಿ ಹತ್ತಿರದಿಂದ ರಾಧಾಕೃಷ್ಣ ನಾಯ್ಕರ ಮನೆವರೆಗೆ ರಸ್ತೆ ನಿರ್ಮಾಣ (ಅಂದಾಜುಮೊತ್ತ 10.00 ಲಕ್ಷ), ಕಾನಮ್ಮ ದೇವಸ್ಥಾನದ ಹಿಂದುಗಡೆ ಪಾಂಡುರಂಗ ನಾಯ್ಕರ ಮನೆ ವರೆಗೆ ರಸ್ತೆ ಸುಧಾರಣೆಗೆ ಭೂಮಿ ಪೂಜೆ (ಅಂದಾಜುಮೊತ್ತ 10.00 ಲಕ್ಷ), ಕಾನಮ್ಮ ದೇವಸ್ಥಾನದ ರಸ್ತೆ ಸುಧಾರಣೆ (ಅಂದಾಜುಮೊತ್ತ 6.00 ಲಕ್ಷ), ನರಿಬೋಳೆ ರಸ್ತೆ ಸುಧಾರಣೆ (ಅಂದಾಜುಮೊತ್ತ 40.00 ಲಕ್ಷ) ದೇವರಬೋಳೆ ರಸ್ತೆ (ಅಂದಾಜು ಮೊತ್ತ 20.00 ಲಕ್ಷ) ಉದ್ಘಾಟನೆ ಮಾಡಿದರು.

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ಆನ್ಲೈನ್ ಲೈವ್ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ : ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್  ಪ್ರಶಂಸೆ

ನಂತರ ಹೆಗಡೆ ಪ್ರೌಢಶಾಲೆ ಹಾಗೂ ಮಾಸೂರು-ಲುಕ್ಕೇರಿ ಪ್ರೌಢಶಾಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿದರು. ಹೆಗಡೆ ಪ್ರೌಢಶಾಲೆಯ ಸಭಾಭವನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ಹೆಗಡೆ ಗ್ರಾಮಪಂಚಾಯತ್ ಭಾಗಕ್ಕೆ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೆರವೇರಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ನಮ್ಮ ಸರ್ಕಾರವು ಜನರ ಮೂಲಭೂತ ಅವಶ್ಯಕತೆಗಳ ಬಗ್ಗೆ ವಿಶೇಷ ಕಾಳಜಿವಹಿಸಿದ್ದು ಹೆಗಡೆಯ ಸುತ್ತಮುತ್ತಲಿನ ಗ್ರಾಮವೂ ಸೇರಿದಂತೆ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗಳಿಗೆ ರಸ್ತೆ ಅಭಿವೃದ್ಧಿಗೆ ದಾಖಲೆ ಪ್ರಮಾಣದಲ್ಲಿ ಅನುದಾನ ಒದಗಿಸಲಾಗಿದೆ. ಹೆಗಡೆ ಸೇರಿದಂತೆ ಸುತ್ತಮುತ್ತಲಿನ ಒಂಭತ್ತು ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ 160ಕೋಟಿ ರೂಪಾಯಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು ಇದರಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಹೆಗಡೆ ಮಿರ್ಜಾನ್ ನಡುವೆ ಬ್ರಿಜ್ ನಿರ್ಮಾಣಕ್ಕೆ 18.20 ಕೋಟಿ ರೂಪಾಯಿ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ಇದರಿಂದ ಹೆಗಡೆ ಹಾಗೂ ಮಿರ್ಜಾನ್ ನಡುವೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

RELATED ARTICLES  ಹಿಂದೂ ಯುವಕರ ಮೇಲೆ ಸುಳ್ಳು ಪ್ರಕರಣ ಖಂಡಿಸಿದಎಲ್ ಆರ್ ಭಟ್ಟ ತೋಟ್ಮನೆ.

ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪಕ್ಷದ ಹಿರಿಯ ಮುಖಂಡರಾದ ವಿನೋದ ಪ್ರಭು, ಡಾ||ಜಿ. ಜಿ. ಹೆಗಡೆ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ ಪಟಗಾರ, ಹೆಗಡೆ ಗ್ರಾಮಪಂಚಾಯತ್ ಸದಸ್ಯರುಗಳಾದ ಬಿ. ಜಿ. ಶಾನಭಾಗ, ಆಶಾ ನಾಯ್ಕ, ವಿದ್ಯಾಲಕ್ಷ್ಮಿ ಗೌಡ, ರಾಮಚಂದ್ರ ಪಟಗಾರ, ಸುರೇಶ ಪಟಗಾರ, ಮಮತಾ ನಾಯ್ಕ, ಪಕ್ಷದ ಸ್ಥಳೀಯ ಪ್ರಮುಖರಾದ ವೆಂಕಟೇಶ ನಾಯ್ಕ, ಅಮರಾನಾಥ ಭಟ್, ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.