ಕುಮಟಾ : ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜು ಮತ್ತು ವಿಧಾತ್ರಿ ಅಕಾಡೆಮಿಯ ಹೆಮ್ಮೆಯ ವಿದ್ಯಾರ್ಥಿ ಕು.ರಾಹುಲ್ ಉಮೇಶ ಶಾನಭಾಗ ಈತ ಪ್ರಸಕ್ತ ಸಾಲಿನ ಎನ್ ಟಿ ಎ ಪ್ರವೇಶ ಪರೀಕ್ಷೆಯಲ್ಲಿ ಬಿ.ಆರ್ಕ್ ನ ಫಲಿತಾಂಶ 98.75 ಪರ್ಸಟೈನ್ ಗಳಿಸಿ ಮಹತ್ವದ ಸಾಧನೆ ಗೈಯ್ದು ಕಾಲೇಜಿನ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಆತನ ಸಾಧನೆಗೆ ಕೊಂಕಣ ಸಂಸ್ಥೆಯ ಅಧ್ಯಕ್ಷರು ,ಗೌರವ ಕಾರ್ಯದರ್ಶಿಗಳು ಹಾಗೂ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್ಟ, ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.