ಯಲ್ಲಾಪುರ: ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಬೈಕಿನಿಂದ ಬಿದ್ದ ಯುವಕನೊಬ್ಬ ಸಾವನಪ್ಪಿದ್ದಾನೆ.
ಹುಬ್ಬಳ್ಳಿಯ ಕಿರಣ್ ಸಿಂಗ್ (24) ಮೃತ ವ್ಯಕ್ತಿ. ಈತ ಹೊಸದಾಗಿ ಖರೀದಿಸಿದ ಬೈಕಿನಲ್ಲಿ ವಿನಾಯಕ ಗಡೇದ್ ಎಂಬಾತರ ಜೊತೆ ಸಾತೊಡ್ಡಿ ಜಲಪಾತದ ಕಡೆ ಸಂಚರಿಸುತ್ತಿದ್ದ. ದೇಹಳ್ಳಿ ಬಳಿಯ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಇಬ್ಬರು ಬಿದ್ದು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸಿಂಗ್‌ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವನಪ್ಪಿದ್ದಾನೆ.

RELATED ARTICLES  ಇಂದು ಉತ್ತರ ಕನ್ನಡದಲ್ಲಿ 51 ಜನರಿಗೆ ಕೊರೋನಾ ಪಾಸಿಟೀವ್