ಕುಮಟಾ : ಗಿಬ್ ಹೈಸ್ಕೂಲ್-೮೯ ಅಲುಮ್ನಿ ಅಸೋಸಿಯೇಶನ್ ಕುಮಟಾ, ಹೆಲ್ತ್ ಪಾಯಿಂಟ್ ಕುಮಟಾ ಮತ್ತು ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ರಾಜ್ಯ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಮಾಸ್ಟರ್ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್ ಮಾರ್ಚ್ ೩, ೪, ೫ ರಂದು ಕುಮಟಾ ಪಟ್ಟಣದ ಪುರಭವನದಲ್ಲಿ ನಡೆಯಲಿದೆ.
ಈ ಕುರಿತಾಗಿ ಸಂಘಟಕರು ಕುಮಟಾದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಂಡು ಮಾಹಿತಿ ನೀಡಿದರು. ಸುದ್ಧಿಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಪವರ್ ಲಿಪ್ಟರ್ ವೆಂಕಟೇಶ ಪ್ರಭು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ನಡೆಯುತ್ತಿರುವ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್ ಇದಾಗಿದ್ದು, ಇತರ ಜಿಲ್ಲೆಗೆ ಮಾದರಿಯಾಗಬೇಕು ಎನ್ನುವ ರೀತಿಯಲ್ಲಿ ಈ ಕಾರ್ಯಮವನ್ನು ನಡೆಸುತ್ತಿದ್ದೆವೆ. ಕರ್ನಾಟಕ ರಾಜ್ಯವನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತ ತಂಡ ನಿರ್ಮಾಣವಾಗಬೇಕು ಎಂಬುದೇ ಈ ಒಂದು ಸ್ಪರ್ಧೆಯ ಮುಖ್ಯ ಉದ್ಧೇಶವಾಗಿದೆ. ಮಾರ್ಚ್ ೩, ೪, ೫ ರಂದು ಕುಮಟಾ ಪಟ್ಟಣದ ಪುರಭವನದಲ್ಲಿ ನಡೆಯಲಿರುವ ಈ ಒಂದು ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಮಾಸ್ಟರ್ ವಿಭಾಗದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯುತ್ತದೆ. ೩ ದಿನದ ಈ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೆಲ್ತ್ ಪಾಯಿಂಟ್ ಜಿಮ್ ಕುಮಟಾ ಇದರ ಮಾಲೀಕರಾದ ಅನಿಲ್ ನಾಯ್ಕ ಆವರು ಮಾತನಾಡಿ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ನಾಯ್ಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಶಾಸಕರಾದ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಟ್ರೋಫಿ ಅನಾವರಣ ಮಾಡಲಿದ್ದು ಸುಧೀರ ಪಂಡಿತ್ ಬಾರ್ಬೆಲ್ ಸೆಟ್ ಉದ್ಘಾಟನೆ ಮಾಡಲಿದ್ದಾರೆ. ಶೈಲೇಶ್ ನಾಯ್ಕ ಸ್ಕ್ವಾಟ್ ಫ್ಲಾಟ್ ಫಾರ್ಮ್ ಉದ್ಘಾಟನೆ ಮಾಡಲಿದ್ದು ವಿಶೇಷ ಆಹ್ವಾನಿತರು ಅತಿಥಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ಕಾರ್ಯಕ್ರಮದ ರೂಪು ರೇಷೆಗಳ ಕುರಿತಾಗಿ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಗಿಬ್ ಹೈಸ್ಕೂಲ್-೮೯ ಅಲುಮ್ನಿ ಅಸೋಸಿಯೇಶನ್‌ನ ಕಾರ್ಯದರ್ಶಿಗಳಾದ ಡಾ. ನಿತೀಶ ಶಾನಭಾಗ ಅವರು ಮಾತನಾಡಿ, ಗಿಬ್ ಹೈಸ್ಕೂಲ್-೮೯ ಅಲುಮ್ನಿ ಅಸೋಸಿಯೇಶನ್‌ನ ಹಿನ್ನೆಲೆಯ ಕುರಿತಾಗಿ ಮಾಹಿತಿ ನೀಡಿದರು. ಸುದ್ಧಿಗೋಷ್ಠಿಯಲ್ಲಿ ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆಯ ತರಬೇತುದಾರರಾದ ಗುರುರಾಜ ಉಪ್ಪಾರ, ಕಾರ್ಯಕ್ರಮ ಸಂಯೋಜಕರಾದ ಸುಬ್ರಹ್ಮಣ್ಯ ಶೆಟ್ಟಿ, ಅಶೋಕ ಶಾನಭಾಗ, ವಿಘ್ನೇಶ್ವರ ಎಮ್.ಪಿ, ಚಂದ್ರು ನಾಯ್ಕ, ಸಲೀಂ, ವಿಶ್ವನಾಥ, ರಾಘವೇಂದ್ರ, ವಿಶ್ವನಾಥ ಕಿಣಿ, ಸಚಿನ, ರವಿ ಮುಂತಾದವರು ಹಾಜರಿದ್ದರು.
ಫೋಟೋ ಇದೆ : ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಬಗ್ಗೆ ಸಂಘಟಕರು ಮಾಹಿತಿ ನೀಡಿದರು.