ಹಳಿಯಾಳ: ‘ಹಣತೆ’ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಜಿಲ್ಲೆ ಈ ಸಂಘಟನೆಯ ಹಳಿಯಾಳ ತಾಲೂಕು ಘಟಕದ ಉದ್ಘಾಟನೆ ಮಾ. ೩ ಶುಕ್ರವಾರ ಸಾಯಂಕಾಲ ೫ ಗಂಟೆಗೆ ಪಟ್ಟಣದ ಲಾಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು ಉದ್ಘಾಟನೆಯನ್ನು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ, ಹಿರಿಯ ಕಥೆಗಾರ ಡಾ. ಬಸು ಬೇವಿನಗಿಡದ ನೆರವೇರಿಸಲಿದ್ದಾರೆ.

RELATED ARTICLES  ಬಾಪು ಸದ್ಭಾವನ ಪುರಸ್ಕಾರಕ್ಕೆ ಡಾ॥ ಗಜು ಹಾಗೂ ಜಿ. ಎಸ್. ಭಟ್ ಆಯ್ಕೆ


ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ಶ್ರೀ ಶೈಲ ಮಾದಣ್ಣನವರ್, ಹಿರಿಯ ವೈದ್ಯ ಡಾ. ಚಂದ್ರಶೇಖರ ಓಶಿವ್ಮಠ, ಹಳಿಯಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ ಕೆ. ಶಿರೋಡಕರ್ ಪಾಲ್ಗೊಳ್ಳಲಿದ್ದಾರೆ.


ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್, ಹಣತೆ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್, ಸಾಹಿತಿ ಸುರೇಂದ್ರ ಬಿರ್ಜಿಮ ಕರ್ನಾಟಕ ಜಾನಪದ ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪ ಬಿರಾದಾರ, ಸಾಹಿತಿ ಭಾರತಿ ನಲ್ವಡೆ, ಶಿಕ್ಷಕಿ ವಿಮಲಾ ಗುನಗ ಗೌರವ ಉಪಸ್ಥಿತಿ ಇರುವರು ಎಂದು ‘ಹಣತೆ’ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಗುನಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕೊಂಕಣದ ಹೆಮ್ಮೆಯ ಜಯಾ ಮಿಸ್ : ನಿಜವಾದ ಅರ್ಥದಲ್ಲಿ ಇವರು ಹಲವು ಮಕ್ಕಳತಾಯಿ !