ಕೋಣಾರೆಯ ಮಹಾವಿಷ್ಣು ದೇವಾಲಯದ ಆವಾರದಲ್ಲಿ ಮೂರೂರು ದೇವರು ಹೆಗಡೆ ಯಕ್ಷವೇದಿಕೆಯಿಂದ ಕರ್ಕಿ ಸತ್ಯಹಾಸ್ಯಗಾರರನ್ನು ಫಲತಾಂಬೂಲ ಹಾಗೂ ಸನ್ಮಾನಪತ್ರದೊಂದಿಗೆ ಹಮ್ಮಿಣಿಯೊಡಗೂಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ದಿಮೆದಾರ ಮುರಲೀಧರ ಪ್ರಭು ಅವರು ನೆರವೇರಿಸಿಕೊಟ್ಟರು.ಮತ್ತು ಮಾತನಾಡುತ್ತ ದೇವರು ಹೆಗಡೆಯವರ ವೇಷಗಾರಿಕೆಯನ್ನು ನೆನಪಿಸುತ್ತ ಒಂದು ಹಾಲ್ ಓಫ್ ಫೇಮ್ ಅಂತ ಮಾಡಿ ಉತ್ತರಕನ್ನಡದ ಶ್ರೇಷ್ಠ ಕಲಾವಿದರನ್ನು ಅವರ ಭಾವಚಿತ್ರ ಮತ್ತು ಕಿರುಪರಿಚಯಮಾಡುವಂತಹ ಚಿಕ್ಕ ಬರಹದೊಂದಿಗೆ ಕ್ರೋಢೀಕರಿಸಿ ಒಂದು ಯಕ್ಷಸಭಾಗ್ರಹಮಾಡಿ ಅಲ್ಲಿ ಕಾಪಿಡಬೇಕೆಂದು ಅಮೂಲ್ಯ ಸಲಹೆಯಿತ್ತರು.ಸನ್ಮಾನ ಸ್ವೀಕರಿಸಿದ ಸತ್ಯಹಾಸ್ಯಗಾರರು ತಮ್ಮ ಎಂಬತ್ತೊಂಬತ್ತರ ವಯಸ್ಸಿನಲ್ಲಿಯಾರ ಸಹಾಯವಿಲ್ಲದೆ ನೇರವಾಗಿ ವೇದಿಕೆಯಮುಂಭಾಗಕ್ಕೆ ಕುಣಿಯುತ್ತಲೇ ಬಂದು ಯಕ್ಷಗಾನದ ಹಾಡನ್ನು ಹಾಡುತ್ತ ದೇವರು ಹೆಗಡೆಯವರು ಹೇಗೆ ಅಭಿನಯಿಸುತ್ತಿದ್ದರೆಂಬ ತಮ್ಮ ಅನುಭವವನ್ನು ಅಭಿನಯಿಸಿತೋರಿದರು.ತಮ್ಮ ಮೇಳ ಮತ್ತು ದೇವರುಹೆಗಡೆಯವರ ಅವಿನಾಭಾವ ಸಂಬಂಧವನ್ನು ಮಾರ್ಮಿಕವಾಗಿ ಬಿಚ್ಚಿಟ್ಟು ಸನ್ಮಾನಪಡೆದ ಧನ್ಯತೆಯನ್ನು ಅಭಿವ್ಯಕ್ತಮಾಡಿದರು.
          ಅತಿಥಿಯಾದ ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣಭಾಗವತ ಕಡತೋಕರು ಸಭಿಕರ ಸ್ಪಂದನೆಗೆ ಬೆರಗಾಗಿ ತನಗೆ ಒಂದು ಚೂರು ಹೆಚ್ಚೇಮಾತಾಡಬೇಕನ್ನಿಸುತ್ತಿದೆ. ಆರೇಳು ನೂರು ಜನರಿದ್ದೂ ಸೂಜಿಬಿದ್ದರೆ ಕೇಳಿಸುವ ಇಂತಹ ಕಲಾರಸಿಕರ ಸಭೆಯೇ ಅಪರೂಪವೆನ್ನುತ್ತˌತಮ್ಮತಂದೆ ಮಂಜುನಾಥ ಭಾಗವತರ ಹಾಗೂ ದೇವರು ಹೆಗಡೆಯವರ ಸಂಬಂಧˌಹಿಂದಿನ ಕಲಾವಿದರ ಪ್ರಾಮಾಣಿಕ ಕಲಾಸೇವೆˌಯಕ್ಷಗಾನದ ಶುಧ್ಧತೆ ಉಳಿಸಿಕೊಳ್ಳಲು ಏನೇನು ಮಾಡಬೇಕೆಂದು ಸಲಹೆ ಇತ್ತರು. ಇಡೀ ಉತ್ತರಕನ್ನಡದ ಯಕ್ಷಗಾನವೇ ಸಭಾಹಿತ ಮಟ್ಟಿನದು ಇಲ್ಲಿ ಕರ್ಕಿಯಪರಂಪರೆಯೂ ಸೇರಿಕೊಂಡಿದೆ ಎನ್ನುತ್ತ ಯಕ್ಷಗಾನದ ಸಂಘಟನೆಯಾಗಬೇಕೆಂದು ಬಹಳ ಸೊಗಸಾಗಿ ಮಾತನಾಡಿದರು.
     

RELATED ARTICLES  ಮತ್ತೆ ಬೆಚ್ಚಿದ ಉತ್ತರ ಕನ್ನಡ : ಭಟ್ಕಳದಲ್ಲಿ 12 ಪಾಸಿಟೀವ್ ಸುದ್ದಿಗೆ ಜನ ಕಂಗಾಲು : ಇನ್ನೂ ಬಂದಿಲ್ಲ ಅಧಿಕೃತ ಪ್ರಕಟಣೆ

ಯಕ್ಷವೇದಿಕೆಯ ಅಧ್ಯಕ್ಷ ಸುಬ್ರಾಯಭಟ್ಟರು ಪ್ರಾಸ್ತವಿಕ ಮಾತನಾಡಿದರು.ನಿತ್ಯಾನಂದ ಹೆಗಡೆ ಸನ್ಮಾನಪತ್ರ ವಾಚಿಸಿದರು .ಯಕ್ಷವೇದಿಕೆಯ ಗೌರವಾಧ್ಯಕ್ಷ ವಿ ಎಸ್ ಹೆಗಡೆ ಹಟ್ಟೀಕೇರಿ ಇವರು ಸಮಾರೋಪದ ಮಾತನಾಡುತ್ತ ತಮ್ಮೆಲ್ಲರ ಸಹಕಾರ ಇದೇ ರೀತಿ ಸಿಕ್ಕರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಂಘಟನೆ ಮಾಡುವುದಾಗಿ ಹೇಳಿದರು.ಜಿ ವಿ ಹೆಗಡೆ ಹುಳಸೇಮಕ್ಕಿ ಧನ್ಯವಾದ ಸಮರ್ಪಣೆ ಮಾಡಿದರು.ದೇವಳದ ಟ್ರಸ್ಟ್ ಅಧ್ಯಕ್ಷ ಜಿ ಆರ ಹೆಗಡೆ ಉಪಸ್ಥಿತರಿದ್ದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಕೊನೆಗೆ ನುರಿತ ಕಲಾವಿದರಿಂದ ನಳದಮಯಂತಿ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು.

RELATED ARTICLES  ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದೇಶಪಾಂಡೆ ಕೌಶಲ್ಯಾಭಿವೃದ್ಧಿ ಪರಿಚಯ ಕಾರ್ಯಕ್ರಮ.

ಜಿ ಕೆ ಹೆಗಡೆ ಹರಿಕೆರಿಯವರು ಅಭಿನಂದನಾ ಭಾಷಣವನ್ನು ಮಾಡುತ್ತ ಸತ್ಯ ಹಾಸ್ಯಗಾರರ ಪಾತ್ರ ಔಚಿತ್ಯತೆˌಅವರ ಸರಳ ಬದುಕುˌಅವರ ದಣಿವರಿಯದ ಉತ್ಸಾಹವನ್ನು  ಮನಮುಟ್ಟುವಂತೆ ವರ್ಣಿಸಿದರು.